ಬೆಂಗಳೂರು-ಆನೇಕಲ್ ನಲ್ಲಿ ನಿರ್ಮಾಣ ಹಂತದ ಕ್ರಿಶ್ಚಿಯನ್ ಶಾಲೆಯ ಎರಡನೇ ಹಂತದ ಸೆಂಟ್ರಿಂಗ್ ಕುಸಿದು ವೆಸ್ಟ್ ಬೆಂಗಾಲ್ ಮೂಲದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವಾನಾಪ್ಪಿದ್ದಾರೆ.ಹದಿನೈದು ಮಂದಿ ಕಾರ್ಮಿಕರಿಗೆ ಗಾಯವಾಗಿದೆ.ಬೆಳಗ್ಗೆ 7 ರ ಸಮಯದಲ್ಲಿ ಘಟನೆ ನಡೆದಿದೆ.ಗಾಯಾಳುಗಳನ್ನು ಹತ್ತಿರದ ಆನೇಕಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಇನ್ನೂ ಸ್ಥಳಕ್ಕೆ ಆನೇಕಲ್ ಪೊಲೀಸರು ಆಗಮಿಸಿದ್ದುಜೆಸಿಬಿಯಿಂದ ಕುಸಿದ ಕಟ್ಟಡದ ಅವಶೇಷಗಳನ್ನು ಹೊರತೆಗೆಯುತ್ತಿದ್ದಾರೆ.