Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೀಸಲಾತಿ, ಒಳಮೀಸಲಾತಿ ಎಲ್ಲವೂ ಸಂವಿಧಾನದ ಚೌಕಟ್ಟಿನಲ್ಲೇ ಆಗಬೇಕು- ಪರಮೇಶ್ವರ್

 ಪರಮೇಶ್ವರ್

geetha

bangalore , ಶುಕ್ರವಾರ, 19 ಜನವರಿ 2024 (14:20 IST)
ಬೆಂಗಳೂರು-ಒಳಮೀಸಲಾತಿ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.ಈ ಹಿಂದೆ ಚಿತ್ರದುರ್ಗದಲ್ಲಿ ಒಳಮೀಸಲಾತಿ ಕೊಡುವ ನಿರ್ಣಯ ಮಾಡಿದ್ದೆವು.ಸದಾಶಿವ ಆಯೋಗದ ವರದಿಯನ್ನು ಮೊದಲ ಅಧಿವೇಶನದಲ್ಲಿ ಕೊದೊದಾಗಿ ಹೇಳಿದ್ದೆವು.ಬಿಜೆಪಿ ಸರ್ಕಾರ ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪಸಮಿತಿ‌ ರಚಿಸಿತ್ತು ಅದರ ಪ್ರಕಾರ ಎಸ್ಸಿ ಸಮುದಾಯದ 101 ಜಾತಿಗಳನ್ನು ನಾಲ್ಕು ಭಾಗ ಮಾಡಿ ಒಳಮೀಸಲು ವರ್ಗೀಕರಣ ಮಾಡಿದ್ರು.

ಅವರು ಹಂಚಿಕೆ ಮಾಡಿದ್ದ ಒಳಮೀಸಲಾತಿ ಅವೈಜ್ಞಾನಿಕ ಅಂತ ಅವರಿಗೂ ಗೊತ್ತು.ನಾವು ಕಾನೂನು ಅಭಿಪ್ರಾಯ ಪಡೆದು ಕೇಂದ್ರಕ್ಕೆ ಸಂವಿಧಾನ ತಿದ್ದುಪಡಿ ಮಾಡಿ ಅಂತ ಕೇಂದ್ರಕ್ಕೆ ಶಿಫಾರಸು ಮಾಡಲು ತೀರ್ಮಾನ ಮಾಡಲಾಗಿದೆ.ನಾವು ಜವಾಬ್ದಾರಿಯಿಂದ ನುಣುಚಿಕೊಂಡಿಲ್ಲ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡಿದ್ರೆ ಒಳ‌ಮೀಸಲಾತಿ ಕೊಡಬಹುದು ಎಂದು ಪರಮೇಶ್ವರ್ ಹೇಳಿದ್ದಾರೆ.
 
ಒಳ ಮೀಸಲಾತಿ ರಾಜಕೀಯ ಅಜೆಂಡಾ ಎಂಬ ಬಿಜೆಪಿ ಆರೋಪ ವಿಚಾರವಾಗಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು,ಬಿಜೆಪಿಯವರು ಏನೇ ವಿಶ್ಲೇಷಣೆ ಮಾಡಬಹುದು.ಆದ್ರೆ ನಮ್ಮ ಕ್ರಮ ಸರಿಯಾಗಿದೆ.ಮೀಸಲಾತಿ, ಒಳಮೀಸಲಾತಿ ಎಲ್ಲವೂ ಸಂವಿಧಾನದ ಚೌಕಟ್ಟಿನಲ್ಲೇ ಆಗಬೇಕು ಎಂದು ಪರಮೇಶ್ವರ್ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನಿಯರಿಗೆ ಈಗ ಇರಾನ್ ಏರ್ ಸ್ಟ್ರೈಕ್ ಭಯ