Publish Date: Fri, 17 Jul 2020 (21:26 IST)
Updated Date: Fri, 17 Jul 2020 (21:27 IST)
ಡೆಡ್ಲಿ ಕೊರೊನಾಕ್ಕೆ ಈ ಜಿಲ್ಲೆಯಲ್ಲಿ ಇಬ್ಬರು ಬಲಿಯಾಗಿದ್ದು, 31 ಹೊಸ ಕೇಸ್ ಗಳು ಪತ್ತೆಯಾಗಿವೆ.
ದಾವಣಗೆರೆ ಜಿಲ್ಲೆಯಲ್ಲಿ 31 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಐವತ್ತು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಮಲೇಬೆನ್ನೂರು ಗ್ರಾಮದ 43 ವರ್ಷದ ಮಹಿಳೆ ಜುಲೈ 14 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಹೈಪರ್ ಟೆನ್ಸನ್, ಡಯಾಬಿಟಿಕ್ ಕಿಟೋ ಅಸಿಡೋಸಿಸ್ ನಿಂದ ಮೃತಪಟ್ಟಿದ್ದು ರಾತ್ರಿ ಅವರಿಗೆ ಸೋಂಕು ಖಚಿತಗೊಂಡಿತ್ತು.
ದಾವಣಗೆರೆಯ 62 ವರ್ಷದ ಪುರುಷ ಇಸ್ಹೆಮಿಕ್ ಹಾರ್ಟ್ ಡಿಸೀಸಸ್ ಹಾಗೂ ಮಯೋಕಾರ್ಡಿಯಲ್ ಇನ್‌ಫ್ರಾಕ್ಷನ್ ನಿಂದ ತಮ್ಮ ಮನೆಯಲ್ಲಿ ಮೃತಪಟ್ಟಿದ್ದರು. ಮರಣಾನಂತರ ಇವರ ಸ್ವಾಬ್ ಸಂಗ್ರಹಿಸಲಾಗಿತ್ತು. ಅವರಿಗೂ ಕೂಡ ರಾತ್ರಿ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿನಿಂದ 24 ಜನ ಸಾವನ್ನಪ್ಪಿದಂತಾಗಿದೆ.