ಬೆಂಗಳೂರು: ಕೋವಿಡ್ ಗೆ ತುತ್ತಾಗಿರುವ ಸಾರಿಗೆ ಸಿಬ್ಬಂದಿಗಳ ಮಾಹಿತಿ ಇಲ್ಲದೆ ಇರುವುದು ಹಾಗೂ ಘೋಷಣೆ ಮಾಡಿರುವ ಪರಿಹಾರ ಹಣ ಪಡೆಯುವ ಬಗ್ಗೆ ಇನ್ನೂ ಆದೇಶ ಹೊರಡಿಸದೇ ಇರುವುದನ್ನು ಖಂಡಿಸಿ ಎಎಪಿ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಗೆ ಪತ್ರ ಬರೆದಿದ್ದಾರೆ.
ಪಕ್ಷದ ಯುವ ಮುಖಂಡ ಮುಕುಂದ್ ಗೌಡ ಆರ್.ಟಿ.ಐ ಕಾಯ್ದೆ ಅಡಿಯಲ್ಲಿ ಪಡೆದಿರುವ ಮಾಹಿತಿಯ ಪ್ರಕಾರ ಬಿಎಂಟಿಸಿ ಮತ್ತು ಕೆ.ಎಸ್.ಆರ್.ಟಿ.ಸಿ ಯಲ್ಲಿ ಕೆಲಸ ಮಾಡುತ್ತಿರುವ ನೌಕರರು ಕಾವಿಡ್ ನಿಂದಾಗಿ ನಿಧನರಾಗಿದ್ದಲ್ಲಿ ಮಾಹಿತಿ ಸಂಸ್ಥೆಯು ಹೊಂದಿರುವುದಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ನಂತರ ಅನೇಕ ನೌಕರರು ನಮ್ಮಲ್ಲಿ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ ಎಂದು ಪಾತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೋವಿದ ಎರಡನೇ ಅಲೆಯ ನಂತರ ಮರಳಿ ಕೆಲಸ ಮಾಡುತ್ತಿರುವ ಈ ಸಂದರ್ಭದಲ್ಲಿ ಮಂತ್ರಿಗಳಾಗಿ ನೌಕರರ ನೆರವಿಗೆ ಬರಬೇಕಾಗಿರುವುದು ಅದ್ಯ ಕರ್ತವ್ಯವಾಗಿದೆಯೆಂದು ತಿಳಿಸಿದ್ದಾರೆ.
ಮುಖ್ಯವಾದ ವಿಷಯಗಳನ್ನು ಈ ಕೆಳಕಂಡಂತೆ ಪ್ರಸ್ತಾಪಿಸಿದ್ದಾರೆ:
• ಕೋವಿಡ್ ಸೋಂಕಿತ ಸಿಬ್ಬಂದಿಗಳ ಸಂಖ್ಯೆ, ದಿನಾಚೆ ಅದವರ ಸಂಖ್ಯೆ, ಅವುಗಳಲ್ಲಿ ಮರಣ ಹೊಂದಿದವರ ಸಂಖ್ಯೆಗಳನ್ನು ಈ ಕೂಡಲೇ ರಿಪೋ ಮಟ್ಟದಲ್ಲಿ ವಿಭಾಗ ಮಟ್ಟದಲ್ಲಿ ಕಲೆಹಾಕಿ ಪರಿಗಣಿಸಬೇಕು.
• ಈಗಲೇ ತಿಳಿಸಿರುವಂತೆ ಮರಣಹೊಂದಿದ ಸಿಬ್ಬಂದಿಯವರು ಕುಟುಂಬಗಳಿಗೆ ನೀಡಲಾಗುವ ಸಹಾಯದನವನ್ನು ಪಡೆದುಕೊಳ್ಳುವುದು ಹೇಗೆ ಎಂಬ ಆದೇಶ ಮತ್ತು ಕ್ರಮಗಳನ್ನು ಈ ಕೂಡಲೇ ಸಿಬ್ಬಂದಿಗಳ ಗಮನಕ್ಕೆ ತರಬೇಕು.
• ನೌಕರರು ಮರಣ ಹೊಂದಿದಲ್ಲಿ ಕುಟುಂಬಕ್ಕೆ ನೀಡಲಾಗುವ ಸೌಲಭ್ಯಗಳನ್ನು ಪಡೆಯುವ ಎಲ್ಲಾ ವ್ಯವಸ್ಥೆಯು ಪಾರದರ್ಶಕವಾಗಿರಬೇಕು ಮತ್ತು ಯಾವುದೇ ಭ್ರಷ್ಟಾಚಾರಕ್ಕೆ ಅನುವು ಮಾಡಿ ಕೊಡದಂತಿರಬೇಕು.