ರಾಜ್ಯದಲ್ಲಿ ಖಾಸಗಿ ಶಾಲೆಗಳ ಅಂಧಾ ದರ್ಬಾರ್ ಕೇಳೋರೇ ಇಲ್ಲದಂತೆಯಾಗಿದೆ.ಇನ್ನೂ ಖಾಸಗಿ ಶಿಕ್ಷಣ ಸಂಸ್ಥೆಗಳ ಫೀಸ್ ಟಾರ್ಚರ್ ನಿಲ್ತಿಲ್ಲ.ಧನದಾಹಿ ಶಿಕ್ಷಣ ಸಂಸ್ಥೆಗಳ ಆಟಕ್ಕೆ ಬ್ರೇಕ್ ಬಿದ್ದಿಲ್ಲ.ಶಿಕ್ಷಣ ಸಂಸ್ಥೆಗಳ ಆಟಕ್ಕೆ ಕೊನೆ ಯಾವಾಗ ಬೀಳುತ್ತೋ ಅಂದ ಹಾಗೆ ಇಂದು ಬೆಂಗಳೂರಿನ ನಾರಾಯಣ ಒಲಂಪಿಯಡ್ ಖಾಸಗಿ ಶಾಲೆಯ ಆಡಳಿತ ಮಂಡಳಿಯ್ದು ಆಡಿದ್ದೇ ಆಟವಾಗೋಗಿದೆ.ಶಾಲೆಯಲ್ಲಿ ನಿತ್ಯ ಫೀಸ್ ಕಟ್ಟುವಂತೆ ಟಾರ್ಚರ್ ಕೊಡಲಾಗುತ್ತಂತೆ,ಹೀಗಾಗಿ ಖಾಸಗಿ ಶಾಲೆ ಆಡಳಿತ ಮಂಡಳಿ ವಿರುದ್ದ ಪೋಷಕರು ಸಿಡಿದೆದ್ರು.ಕೊನೆಗೆ ಶಾಲೆ ನಿರ್ಧಾರಕ್ಕೆ ಬೇಸತ್ತ ಪೋಷಕರು ಶಾಲೆಯ ಮುಂಭಾಗ ಧರಣಿ ನಡೆಸಿದ್ರು.ಫೀಸ್ ಕಟ್ಟಿಲ್ಲ ಅಂತ ಅನ್ ಲೈನ್ ಕ್ಲಾಸ್ ಬ್ಲಾಕ್ ಮಾಡಿದ ಧನಧಾಹಿತಯಂತೆ ಶಾಲೆ ವರ್ತಿಸುತ್ತಿದೆ.ಅನ್ ಲೈನ್ ಕ್ಲಾಸ್ ಓಫನ್ ಮಾಡಿ ಅಂತ ಪೋಷಕರು ಒತ್ತಾಯ ಮಾಡಿದ್ರು ಶಾಲೆಯ ಆಡಳಿತ ಮಂಡಳಿ ಮಣಿಯಲಿಲ್ಲ.ಹೀಗಾಗಿ ನೊಂದ ಪೋಷಕರು ಸ್ಕೂಲ್ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು.