Publish Date: Sat, 06 May 2023 (16:16 IST)
Updated Date: Sat, 06 May 2023 (17:32 IST)
ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮೆಗಾ ರೋಡ್ ಶೋ ಹಿನ್ನೆಲೆ, ಬೆಂಗಳೂರಿನ ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟುವ ಹಿನ್ನೆಲೆಯಲ್ಲಿ ಸಂಚಾರ ಮಾರ್ಗ ಬದಲಾಯಿಸಲಾಗಿತ್ತು. ಬಸ್, ಆಟೋ, ಬೈಕ್, ಖಾಸಗಿ ವಾಹನಗಳಿಗೆ ಬದಲಿ ಮಾರ್ಗ ಬಳಸಲು ಸೂಚನೆ ನೀಡಲಾಗಿತ್ತು.. ಬೆಂಗಳೂರು ಸಂಚಾರಿ ಪೊಲೀಸರು ಸವಾರರಿಗೆ ಈ ಕುರಿತು ಸೂಚನೆ ನೀಡಿದ್ರು.. ಜೆ.ಪಿ.ನಗರ, RBI ಲೇಔಟ್, ರೋಸ್ ಗಾರ್ಡನ್, ಜೆಜೆ ನಗರ, ಬಿನ್ನಿಮಿಲ್, ಬುಲ್ ಟೆಂಪಲ್, ರಾಮಕೃಷ್ಣ ಆಶ್ರಮ ರಸ್ತೆಗಳಲ್ಲಿ ಮೋದಿ ರೋಡ್ ಶೋ ನಡೆಯಿತು. ಈ ಹಿನ್ನೆಲೆಯಲ್ಲಿ ಬದಲಿ ಮಾರ್ಗ ಬಳಸಲು ಸೂಚನೆ ನೀಡಲಾಗಿತ್ತು.. ಅಂತೆಯೇ ಚಾಮರಾಜಪೇಟೆ ಮುಖ್ಯರಸ್ತೆ, ಬಾಳೆಕಾಯಿ ಮಂಡಿ, ಕೆ.ಪಿ.ಅಗ್ರಹಾರ, ಮಾಗಡಿ ರಸ್ತೆ, ಚೋಳರಪಾಳ್ಯ, ಎಂ.ಸಿ.ವೃತ್ತ, ಬಿಜಿಎಸ್ ಮೈದಾನ, ಬಸವೇಶ್ವರ ನಗರ, ಶಂಕರಮಠ, ಮೋದಿ ಆಸ್ಪತ್ರೆ, ನವರಂಗ್ಮಲ್ಲೇಶ್ವರ ಸರ್ಕಲ್ ರಸ್ತೆ ಬದಲಿಗೆ ಬೇರೆ ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿತ್ತು.