Publish Date: Sat, 06 May 2023 (15:10 IST)
Updated Date: Sat, 06 May 2023 (15:54 IST)
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಮತ್ತೆ ಕಮಲ ಅರಳಿಸಲು ಬಿಜೆಪಿ ಭಾರಿ ಕಸರತ್ತು ನಡೆಸಿದೆ.. ಬೆಂಗಳೂರಿಗಿಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ರೋಡ್ ಶೋ ನಡೆಸಿದ್ದಾರೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಸಿದ್ರು. ರೋಡ್ ಶೋಗೂ ಮುನ್ನ ಮೈಸೂರಿನ ಪೇಟ ಧರಿಸಿದ ಪ್ರಧಾನಿ ಮೋದಿ, ಬೆಂಗಳೂರಿನ ಸೋಮೇಶ್ವರ ಸಭಾ ಭವನದಿದಂದ ರೋಡ್ ಶೋ ಆರಂಭಿಸಿದ್ರು.