Publish Date: Fri, 09 Jun 2023 (20:32 IST)
Updated Date: Fri, 09 Jun 2023 (18:34 IST)
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಎರಡು ದಿನಗಳ ಕಾಲ ಶಕ್ತಿ ದೇವತೆಗಳ ದರ್ಶನಕ್ಕೆ ತೆರಳಲಿದ್ದಾರೆ. ನಾಳೆ, ನಾಡಿದ್ದು ಮಧ್ಯಪ್ರದೇಶ, ಉಜ್ಜೈನಿಯಲ್ಲಿ ಹೋಮ, ಪೂಜೆ ಮಾಡಲಿದ್ದಾರೆ. ನಾಳೆ ಮಧ್ಯಪ್ರದೇಶದ ಬಾಗಲ್ಮುಖಿ ಪೀತಾಂಬರ ಪೀಠಕ್ಕೆ ಭೇಟಿ ನೀಡಲಿದ್ದಾರೆ. ಶಕ್ತಿ ದೇವತೆ ಭೈರವಿಗೆ ಡಿ.ಕೆ.ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಾಡಿದ್ದು ಸಂಜೆ ಉಜ್ಜೈನಿಯಲ್ಲಿರುವ ಮಹಾಕಾಲ, ಕಾಲಭೈರವ ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ. ಕಾಲಭೈರವನ ಹೆಸರಲ್ಲಿ ಶತ್ರು ಸಂಹಾರ ಹೋಮ ನಡೆಸಲಿದ್ದಾರೆ. ತಿಹಾರ್ ಜೈಲಿನಿಂದ ಬಿಡುಗಡೆ ನಂತ್ರ ಇದೇ ದೇವಸ್ಥಾನಗಳಲ್ಲಿ ಡಿ.ಕೆ.ಶಿವಕುಮಾರ್ ಹೋಮ ನಡೆಸಿದ್ದರು.