Publish Date: Fri, 09 Jun 2023 (15:30 IST)
Updated Date: Fri, 09 Jun 2023 (18:08 IST)
ಅಭೂತಪೂರ್ವ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಸಂಪೂರ್ಣ ಸಚಿವ ಸಂಪುಟ ರಚನೆ ಮಾಡಿದೆ. ಸಂಪುಟ ರಚನೆ ನಂತರ ಸಚಿವ ಸ್ಥಾನ ವಂಚಿತ ಶಾಸಕರು ಅಸಮಾಧಾನಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಜಿಲ್ಲಾ ಉಸ್ತುವಾರಿ ನೇಮಕಕ್ಕೆ ಕಾದು ಕುಳಿತಿದ್ದು, ಯಾವಾಗ ಹಂಚಿಯಾಗುತ್ತದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ರಿವಿಲ್ ಮಾಡಿದ್ದಾರೆ. ಇಂದು ಅಥವಾ ನಾಳೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಸಾಧ್ಯತೆ ಇದೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ಕೆಲ ಜಿಲ್ಲೆಗಳಿಗೆ ಸಚಿವರು ಇಲ್ಲ, ಇದೆಲ್ಲವನ್ನೂ ಪರಿಶೀಲಿಸಬೇಕಾಗುತ್ತೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕದಲ್ಲಿ ಯಾವುದೇ ಸಮಸ್ಯೆ ಆಗಲ್ಲ. 34 ಮಂದಿ ಸಚಿವರನ್ನ ಒಂದೇ ಬಾರಿಗೆ ನೇಮಕ ಮಾಡುತ್ತೇವೆ. ನಮ್ಮ ಪಕ್ಷ ಸಧೃಡವಾಗಿದೆ ಎಂದರು.