Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನೈಋತ್ಯ ಮುಂಗಾರು ಅಬ್ಬರ ವಿವಿಧ ಜಿಲ್ಲೆಗಳಲ್ಲಿ ಆರಂಭವಾಗಿದೆ. ತರಕಾರಿಗಳ ಬೆಲೆಗಳಲ್ಲಿ ಏರಿಳಿತ ಆರಂಭವಾಗಿದೆ. ಇನ್ನು ಬೆಂಗಳೂರಿನ ಕೆ ಆರ್ ಮಾರುಕಟ್ಟೆಯಲ್ಲಿ 100 ರೂ. ಗಡಿ ದಾಟಿದ್ದ ಟೊಮೆಟೋ ಬೆಲೆ ಈಗ ಕೆ. ಜಿ. 10 ರಿಂದ 20 ರೂ. ತಲುಪಿದ್ದು, ರೈತ ಕಂಗಾಲಾಗಿದ್ದಾನೆ. ಗಗನಕ್ಕೇರಿದ್ದ ಟೊಮೆಟೋ ಬೆಲೆ ಕಳೆದ ಒಂದು ವಾರದಿಂದ ಇಳಿಕೆ ಕಾಣಲು ಆರಂಭವಾಗಿತ್ತು. ಈಗ ಅದು ಭಾರೀ ಕುಸಿತ ಕಂಡಿದೆ. ದರ ಇಳಿಕೆಯಿಂದ ಜನರಿಗೆ ಅನುಕೂಲವಾದರೆ ರೈತರಿಗೆ ನಷ್ಟ ಉಂಟಾಗುತ್ತಿದೆ.