ಬೆಂಗಳೂರಿನ ನೈಸ್ ರಸ್ತೆಯ ಟೋಲ್ ಶುಲ್ಕ ಏರಿಕೆ ಬೆನ್ನಲ್ಲೇ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮತ್ತು ಅತ್ತಿಬೆಲೆ ಟೋಲ್ ಶುಲ್ಕ ಹೆಚ್ಚಳ ಮಾಡಲಾಗಿದೆ. ಈ ಮೂಲಕ ಇದುವರೆಗೆ 20 ರೂಪಾಯಿ ಟೋಲ್ ನೀಡಿ ಫ್ಲೈಓರ್ ಬಳಸುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ 5 ರೂಪಾಯಿ ಹೆಚ್ಚಿಸಲಾಗಿದೆ.
ವಾಹನ ಸವಾರರಿಗೆ ಟೋಲ್ ಬರೆ ಬಿದ್ದಿದೆ. ಲಘು ಮೋಟಾರ್ ವಾಹನಗಳ ಒಂದು ಬಾರಿಯ ಸಂಚಾರದ ಟೋಲ್ ಶುಲ್ಕ 25 ರೂ.ಗಳಿಂದ 30 ರೂಪಾಯಿಗಳಿಗೆ ಏರಿಕೆಯಾಗಿದ್ದರೆ, ದೈನಂದಿನ ಪಾಸ್ ದರ 35 ರೂಪಾಯಿಗಳಿಂದ 40 ರೂಪಾಯಿಗಳಿಗೆ ಏರಿಕೆಯಾಗಿದೆ. ಇನ್ನು ಮಾಸಿಕ ಪಾಸ್ ದರ 725 ರೂಪಾಯಿಗಳಿಂದ 830 ರೂಪಾಯಿಗಳಿಗೆ ಏರಿಕೆಯಾಗುವ ಮೂಲಕ ವಾಹನ ಸವಾರರಿಗೆ ಮತ್ತೊಂದು ಎನ್ ಹೆಚ್ ಐಎ ಶಾಕ್ ನೀಡಿದಂತಾಗಿದೆ..