ಕೋಲ್ಕತಾದ ಕಾಲಿಘಾಟ್ ಪ್ರದೇಶದಲ್ಲಿ ಒಬ್ಬರ ಮನೆಯಲ್ಲಿ ಕಳ್ಳನನ್ನು ಹಿಡಿಯಲು ಮತ್ತು ಕದ್ದ ಮಾಲುಗಳನ್ನು ವಶಪಡಿಸಿಕೊಳ್ಳಲು ಸಾಕು ನಾಯಿಯೊಂದು ಕುಟುಂಬಕ್ಕೆ ಸಹಾಯ ಮಾಡಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸದಿಂದ ಸ್ವಲ್ಪ ದೂರದಲ್ಲಿರುವ ಕಾಳಿಘಾಟ್ ಅಗ್ನಿಶಾಮಕ ಠಾಣೆ ಬಳಿಯ ಜಾದು ಭಟ್ಟಾಚಾರ್ಯ ಲೇನ್‌ನಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಮುಂಜಾನೆ 4 ಗಂಟೆ ಸುಮಾರಿಗೆ ಕಳ್ಳನೊಬ್ಬ ಮನೆಗೆ ನುಗ್ಗಿ ಮುಖ್ಯ ಬಾಗಿಲಿನ ಬೀಗವನ್ನು ಮುರಿದು ಕೆಲವು ವಸ್ತುಗಳನ್ನು ಕದ್ದ ನಂತರ ರೆಫ್ರಿಜರೇಟರ್‌ನಲ್ಲಿದ್ದ ಆಹಾರವನ್ನು ತಿನ್ನುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನು ಗಮನಿಸಿದ ಮನೆಯ ಮಹಿಳೆ ಎಚ್ಚೆತ್ತುಕೊಂಡು ಎಲ್ಲರನ್ನು ಕೂಗಿದ್ದಾರೆ. ಅವರ ಕಿರುಚಾಟ ಕೇಳಿ ಉಳಿದವರೂ ಎಚ್ಚರಗೊಂಡರು ತಕ್ಷಣ ಮಹಿಳೆ ಬಳಿಗೆ ಬಂದಿದ್ದಾರೆ. ಇದರಲ್ಲಿ ಪ್ರಸೇನ್‌ಜಿತ್ ಚಕ್ರವರ್ತಿ ಎನ್ನವವರು ಕಳ್ಳನನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಂತೆ, ಆತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಗಮನಿಸಿದ ಅವರ ಮನೆಯ ನಾಯಿ ರಾಕಿ ಕಳ್ಳನ ಮೇಲೆ ಎರಗಿತು. ಮನೆಯವರಿಗೆ ಕಳ್ಳನನ್ನು ಹಿಡಿಯಲು ಈ ನಾಯಿ ಸಹಾಯ ಮಾಡಿದೆ. ನಾಯಿ ಕಳ್ಳನನ್ನು ಕಚ್ಚಿತು ಮತ್ತು ಅವನ ಕಾಲನ್ನು ಹಿಡಿದಿತ್ತು. ನಂತರ ಮನೆಯವರು ಕಳ್ಳನನ್ನು ಹಿಡಿಯಲು ಪೊಲೀಸರಿಗೆ ಕರೆ ಮಾಡಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದು ನಾಯಿಯ ಸಹಾಸದ ಕೆಲಸವಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ. ಈ ಪ್ರದೇಶದಲ್ಲಿ ತರಕಾರಿ ಮಾರಾಟಗಾರ ಮಾಡುವ ಮೂಲಕ ಅನೇಕ ಮನೆಗಳಿಗೆ ಕನ್ನ ಹಾಕಿದ್ದಾರೆ ಮತ್ತು ಈ ಪ್ರದೇಶದ ಆಸು-ಪಾಸಿನಲ್ಲಿ ಇವರ ದೊಡ್ಡ ಗ್ಯಾಂಗ್ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ” ಎಂದು ಅವರು ಹೇಳಿದರು. ಆರೋಪಿಯು ಮನೆಯ ದೇವರಿಗೆ ತೊಡಿಸಿದ ಚಿನ್ನಾಭರಣಗಳನ್ನು ಕದಿಯಲು ಯತ್ನಿಸುತ್ತಿದ್ದ ಎಂದು ತಿಳಿಸಿದೆ