Publish Date: Sat, 09 May 2020 (09:26 IST)
Updated Date: Sat, 09 May 2020 (09:27 IST)
ಬೆಂಗಳೂರು : ಕರ್ನಾಟಕಕ್ಕೆ ಇಂದು ಕೊರೊನಾ ಶನಿಕಾಟ ಎದುರಾಗಲಿದೆ. ಇಂದೂ ಕಾರ್ಕೋಟಕ ಕೊರೊನಾ ಸ್ಫೋಟವಾಗುವ ಸಂಭವವಿದೆ ಎನ್ನಲಾಗಿದೆ.
ನಿನ್ನೆ ಕರಾಳ ಶುಕ್ರವಾರವಾಗಿತ್ತು. ಆದರೆ ರಾಜ್ಯಕ್ಕೆ ಇಂದು ಶನಿವಾರ ಶಾಕ್ ನೀಡಲಿದ್ದು, 5 ಜಿಲ್ಲೆಗಳಲ್ಲಿ ಕೊರೊನಾ ಸ್ಫೋಟವಾಗುವುದು ಪಕ್ಕಾ ಎನ್ನಲಾಗಿದೆ.
ಇಂದು ರಾಜ್ಯದಲ್ಲಿ 257 ಜನರ ವರದಿ ಬರಲಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ಬೆಳಗಾವಿ ಜಿಲ್ಲೆಯ 233 ಜನರ ವರದಿ, ಚಿತ್ರದುರ್ಗದಲ್ಲಿ 21 ತಬ್ಲಿಘಿಗಳ ವರದಿ ಬರಲಿದೆ. ಕೊಪ್ಪಳ ಜಿಲ್ಲೆಯ 112 ವರದಿ ಮೇಲೆ ಕಣ್ಣು ಇಡಲಾಗಿದೆ. ಅಲ್ಲದೇ ಗ್ರೀನ್ ಝೋನ್ ಕೊಪ್ಪಳದಲ್ಲಿ ಕೊರೊನಾ ಭೀತಿ ಎದುರಾಗಿದೆ. ದಾವಣಗೆರೆ ಜಿಲ್ಲೆಗೂ ಇಂದು ಶಾಕ್ ಕಾದಿದೆ ಎನ್ನಲಾಗಿದೆ.