Publish Date: Sat, 09 May 2020 (06:34 IST)
Updated Date: Sat, 09 May 2020 (06:36 IST)
ಬೆಂಗಳೂರು : ಮುಖದ ಕಾಂತಿ ಹೆಚ್ಚಿಸುವ ಸಲುವಾಗಿ ಮುಖ ವಾಶ ಮಾಡಿಕೊಳ್ಳಲು ಕೆಮಿಕಲ್ ಯುಕ್ತ ಫೇಶಿಯಲ್ಸ್ , ಸಾಬೂನುಗಳನ್ನು ಬಳಸುತ್ತೇವೆ, ಅದರ ಬದಲು ಇದನ್ನು ಬಳಸಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ.
ಕಡಲೆ ಹಿಟ್ಟಿನಲ್ಲಿ ಚರ್ಮಕ್ಕೆ ಬೇಕಾದ ಹಲವು ಪೋಷಕಾಂಶಗಳಿವೆ. ಚರ್ಮದ ನೆರಿಗೆ ಮತ್ತು ಕಾಂತಿ ಕಳೆದುಕೊಳ್ಳುವ ಸಮಸ್ಯೆಗೆ ಕಡಲೆಹಿಟ್ಟನ್ನು ಬಳಸಬಹುದು. ಕಡಲೆಹಿಟ್ಟನ್ನು ಸಾಬೂನು, ಫೇಶಿಯಲ್ ಗಳಲ್ಲಿ ಉಪಯೋಗಿಸಲಾಗುತ್ತದೆ.
ಕಡಲೆಹಿಟ್ಟು ನೈಸರ್ಗಿಕ ಕ್ಲೀನರ್ ಕೂಡ ಚರ್ಮದ ಆಳದಲ್ಲಿ ಕುಳಿತಿರುವ ಕೊಳೆ ಹೊರಗೆ ಹಾಕಿ ಸತ್ತಕೋಶಗಳನ್ನು ಹೊರಹಾಕುತ್ತದೆ. ಚರ್ಮಕ್ಕೆ ಬಿಗಿತನ ತಂದುಕೊಡುವ ಕಡಲೆ ಹಿಟ್ಟಿನಿಂದ ನಿತ್ಯ ಮುಖ ತೊಳೆಯುವುದು ಒಳಿತು.