ಬೆಂಗಳೂರು : ಜನರಿಗೆ ಆಹಾರ ಕಿಟ್ ಕೊಡಲು ಕಮಿಷನ್ ಕೇಳಿದ ಆರೋಪ ಇದೀಗ ತಿಪಟೂರು ಶಾಸಕ ಬಿಸಿ ನಾಗೇಶ್ ವಿರುದ್ಧ ಕೇಳಿಬಂದಿದೆ.
ಶಾಸಕ ಬಿಸಿ ನಾಗೇಶ್ ಕಿಟ್ ಕೇಳಿದ್ದಕ್ಕೆ 20% ಕಮಿಷನ್ ಗೆ ಡಿಮ್ಯಾಂಡ್ ಮಾಡದ್ದಾರಂತೆ. ನಿಮಗೆಲ್ಲಾ ಕೆಲಸ ಕೊಡಿಸಿದ್ದೇನೆ. ಬೇರೆಯವರಂತೆ ಕಮಿಷನ್ ಪಡೆದಿಲ್ಲ. ಇನ್ಮುಂದೆ ಎಲ್ಲಾ ಅಭಿವೃದ್ಧಿ ಕಾರ್ಯಕ್ಕೂ ಕಮಿಷನ್ ಕೊಡ್ಬೇಕು. ಎಲ್ಲಾ ಶಾಸಕರಂತೆ ನನಗೂ 20% ಕಮಿಷನ್ ಕೊಡಬೇಕು ಎಂದು ತಿಪಟೂರು ಕ್ಷೇತ್ರದ ಗ್ರಾಮವೊಂದರ ನಿವಾಸಿ ಜೊತೆ ಶಾಸಕ ಬಿಸಿ ನಾಗೇಶ್ ಮೊಬೈಲ್ ನಲ್ಲಿ ಮಾತನಾಡಿದ್ದರೆನ್ನಲಾದ ಆಡಿಯೋ ಸಂಭಾಷಣೆ ಇದೀಗ ಫುಲ್ ವೈರಲ್ ಆಗಿದೆ.