Publish Date: Fri, 05 May 2023 (07:20 IST)
Updated Date: Fri, 05 May 2023 (09:30 IST)
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ವತಿಯಿಂದ ಮೇ 10 ರಂದು ತಪ್ಪದೇ ಮತ ಚಲಾಯಿಸುವವರಿಗೆ 100 ರೂ. ಉಚಿತ ಬೈಸಿಕಲ್ ರಿಚಾರ್ಜ್ ಪಡೆಯುವ ಸುವರ್ಣಾವಕಾಶ ನೀಡಿದೆ.
ಮತ ಚಲಾಯಿಸುವ ಮೂಲಕ ಸವಾರಿ ಸವಾರರ ಖಾತೆಗೆ 100 ರೂ. ಗಳ ಉಚಿತ ರಿಚಾರ್ಜ್ ಕೊಡುಗೆ ಪಡೆಯಬಹುದು ಎಂದು ಹೇಳಿದೆ.
ಅಸ್ತಿತ್ವದಲ್ಲಿರುವ ಸೈಕಲ್ ಬಳಕೆದಾರರು ಮೇ 10 ರಂದು ಮತ ಚಲಾಯಿಸಿದ ನಂತರ ನಿಮ್ಮ ತೋರುಬೆರಳನ್ನು ಶಾಯಿಯಿಂದ ತೋರಿಸುವ ಸೆಲ್ಫಿ ತೆಗೆದು, ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 6363803942 ಸಂಖ್ಯೆಗೆ ವಾಟ್ಸಪ್ ಮಾಡಬೇಕು.
ಹೊಸ ಬಳಕೆದಾರರು ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಮೇ 10 ರೊಳಗೆ ಸವಾರಿ ಸ್ಮಾರ್ಟ್ ಕಾರ್ಡ್ ಪಡೆದು, ಅಸ್ತಿತ್ವದಲ್ಲಿರುವ ಸವಾರಿ ಬಳಕೆದಾರರ ಕಾರ್ಯವಿಧಾನ ಅನುಸರಿಸಬೇಕು.