Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಿಜೆಪಿ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ- ಶಾಸಕ ರವಿ ಸುಬ್ರಹ್ಮಣ್ಯ

ಬಿಜೆಪಿ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ- ಶಾಸಕ ರವಿ ಸುಬ್ರಹ್ಮಣ್ಯ
bangalore , ಶನಿವಾರ, 27 ಆಗಸ್ಟ್ 2022 (20:23 IST)
ಬೇರೆ ಪಕ್ಷದಿಂದ ಬರುವವರಿಗೆ ಮಣೆ ಹಾಕುತ್ತಿರೋ ವಿಚಾರವಾಗಿ ಶಾಸಕ ರವಿ ಸುಬ್ರಹ್ಮಣ್ಯ ಪ್ರತಿಕ್ರಿಯಿಸಿದ್ದಾರೆ.
 
ಇನ್ನೂ ಅನೇಕ ಜನ ಕೇಳಿದ್ರು ಅಷ್ಟು ಜನ ಬಂದ್ರು ಅಂತ.ನಮಗೆ ಸಂಘಟನೆ ಮುಖ್ಯ, ಜನರ ಹಿತ ಕೂಡ ಮುಖ್ಯ.ನಮಗೆ ಅವಕಾಶ ಹೋಗುತ್ತೆ ಅಂತ ಸಂಕುಚಿತ ಮನೋಭಾವದಲ್ಲಿ ಯೋಚನೆ ಮಾಡಲ್ಲ.ಬರುವವರಿಗೆಲ್ಲ ಆಮಿಷ ತೋರಿಸಿ ಕರೆತರ್ತಿಲ್ಲ.ಯಾರು ಬಿಜೆಪಿ ಸಿದ್ಧಾಂತ ಒಪ್ಪಿ ಬರ್ತಾರೆ ಅವರಿಗೆ ಸ್ವಾಗತ.75 ವರ್ಷ ಮೇಲ್ಪಟ್ಟವರಿಂದ ಸಲಹೆ ಪಡೆಯುತ್ತೇವೆ ಎಂದ ರವಿ ಸುಬ್ರಹ್ಮಣ್ಯ ಹೇಳಿದ್ದಾರೆ.
 
 ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವ ನಡೆಯುತ್ತಾ ಇಲ್ವಾ ಅನ್ನೋ ಜಿಜ್ಞಾಸೆ ಇತ್ತು.ಅದು ಸರ್ಕಾರದ ಜಮೀನು ಆಗಿರೋದ್ರಿಂದ ನಾಗರೀಕರ ಒತ್ತಾಸೆ ಮೇರೆಗೆ ಗಣೇಶೋತ್ಸವ ನಡೀಬೇಕು ಅನ್ನೋ ಒತ್ತಾಸೆ ಇದೆ.ಬಿಜೆಪಿ ಧಾರ್ಮಿಕ ಭಾವನೆಗೆ ಬೆಲೆ ಕೊಡಲಿದೆ.ಸರ್ಕಾರ ಕೂಡ ಸಾರ್ವಜನಿಕರ ಧಾರ್ಮಿಕ ಭಾವನೆಗೆ ಸ್ಪಂದಿಸಿ ಆಚರಣೆಗೆ ಅನುಮತಿಗೆ ಕೊಡಲಿದೆ.ನಾವೂ ಕೂಡ ಶ್ರದ್ಧಾ ಭಕ್ತಿಗೆ ಹೆಚ್ಚು ಬೆಂಬಲ ಕೊಡ್ತೀವಿ ಎಂದಿದ್ದಾರೆ.
 
ಇದೇ ವೇಳೆ ತೈವಾನ್ ವಿಚಾರವಾಗಿಯೂ ರವಿ ಸುಬ್ರಹ್ಮಣ್ಯ ಮಾತನಾಡಿದ್ದಾರೆ. ಅಮೇರಿಕಾ ಅವರ ಪರ ನಿಂತಿದೆ.ಚೈನಾ ಕಾಲು ಕೆರೆದುಕೊಂಡು ಯುದ್ಧಕ್ಕೆ ಹೋಗ್ತಿದೆ.ಬೆಂಗಳೂರಿನಲ್ಲಿ ಚೈನಾ ಬೆಂಬಲಿಸಿ ನಡೆಯಲಿರೋ ಫೋಟೋ ಎಕ್ಸಿಬಿಷನ್ ನಲ್ಲಿ ವಿಪಕ್ಷ ನಾಯಕ ಭಾಗಿಯಾಗ್ತಿದ್ದಾರೆ.ಆದರೆ ಈಗ ಭಾಗಿಯಾಗಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.ಇದು ಸ್ವಾಗತಾರ್ಹ, ಅವರಿಗೆ ಈಗಲಾದ್ರೂ ತಿಳುವಳಿಕೆ ಬಂದಿದೆ ಅನ್ನೋದು ಸಂತೋಷ ಎಂದು ರವಿ ಸುಬ್ರಹ್ಮಣ್ಯ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಾವರ್ಕರ್ ಅಧ್ಯಯನ ಪೀಠಕ್ಕೆ ಕಾಂಗ್ರೆಸ್ ಟ್ವೀಟ್ ನಲ್ಲಿ ಲೇವಡಿ