Publish Date: Sat, 27 Aug 2022 (19:12 IST)
Updated Date: Sat, 27 Aug 2022 (19:15 IST)
ಮಳೆ ಅವಾಂತರಕ್ಕೆ ಕೋಳಿ ಫಾರಂಗೆ ಮಳೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಸಾವಿರಾರು ಕೋಳಿಗಳ ಮಾರಣಹೋಮ ಆಗಿದೆ. ಕೋಲಾರ ತಾಲ್ಲೂಕಿನ ಚೆಲುವನಹಳ್ಳಿಯಲ್ಲಿ ಘಟನೆ ನೆಡೆದಿದ್ದು, ಗ್ರಾಮದ ಚೌಡಪ್ಪ ಅವರಿಗೆ ಸೇರಿದ ಕೋಳಿ ಫಾರಂ ಆಗಿದೆ. ಕೋಳಿ ಫಾರಂನಲ್ಲಿದ್ದ 8500 ಕೋಳಿಗಳು ಮೃತಪಟ್ಟಿವೆ. ತಡರಾತ್ರಿ ಸುರಿದ ಭಾರಿ ಮಳೆಗೆ ಅನೇಕ ಕೋಳಿಗಳು ಕೊಚ್ಚಿ ಹೋಗಿದ್ದು, ಸ್ಥಳಕ್ಕೆ ತಹಸೀಲ್ದಾರ್ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.