Publish Date: Fri, 29 May 2020 (21:03 IST)
Updated Date: Fri, 29 May 2020 (21:04 IST)
ರಾಜ್ಯದಲ್ಲಿ ಕೋವಿಡ್ – 19 ತಡೆಗೆ ಸರಕಾರ ಸಮರೋಪಾದಿಯಲ್ಲಿ ಕಾರ್ಯಾಚರಣೆ ಮುಂದುವರಿಸಿದೆ.
ಈ ನಡುವೆ ಬಾರ್ ಅಂಡ್ ರೆಸ್ಟೋರೆಂಟ್ ಗಳು ಹಾಗೂ ಜಿಮ್ ಗಳನ್ನು ಜೂನ್ 1 ರ ನಂತರವೂ ಶುರು ಮಾಡೋದಕ್ಕೆ ಅವಕಾಶವನ್ನು ಸರಕಾರ ನೀಡೋದಿಲ್ಲ. ಹೀಗಂತ ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಹೋಟೆಲ್ ಗಳು ಆರಂಭಗೊಳ್ಳುತ್ತವೆ. ಆದರೆ ಕೇಂದ್ರ ಸರಕಾರದ ನಿರ್ದೇಶನ ಬಂದ ಬಳಿಕವಷ್ಟೇ ಹೊಸ ಮಾರ್ಗ ಸೂಚಿ ಪ್ರಕಾರ ಇನ್ನಿತರ ಉದ್ಯಮಗಳ ಆರಂಭಕ್ಕೆ ಸರಕಾರ ಅನುಮತಿ ನೀಡಲಿದೆ ಎಂದು ತಿಳಿಸಿದ್ದಾರೆ.