Publish Date: Sat, 17 Dec 2022 (16:54 IST)
Updated Date: Sat, 17 Dec 2022 (16:56 IST)
ಬೆಂಗಳೂರಿನ ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿ ದಾಖೆಲೆಗಳು ಕಳ್ಳತನವಾಗಿದೆ. ಎರಡನೆ ಶನಿವಾರ ಮತ್ತು ಭಾನುವಾರ ರಜೆಯ ಹಿನ್ನೆಲೆ ಕಛೇರಿಯಲ್ಲಿ ಯಾರು ಇರಲಿಲ್ಲ. ಯಾರೂ ಇಲ್ಲದ್ದನ್ನು ಕಂಡು ಸಹಾಯಕ ಕಾರ್ಯಪಾಲಕ ಕಛೇರಿಯಲ್ಲಿ ಕಳ್ಳತನ ಮಾಡಲಾಗಿದೆ. ಇತ್ತೀಚೆಗೆ ಪಿಡಬ್ಲೂಡಿ ಕಛೇರಿಯಲ್ಲಿ ಹೊಸ ಕಂಪ್ಯೂಟರ್ಗಳನ್ನು ಅಳವಡಿಸಲಾಗಿತ್ತು. ಇದನ್ನು ಮನಗೊಂಡು ಕಂಪ್ಯೂಟರ್ ಹಾಗೂ ದಾಖಲೆಗಳನ್ನು ಖದೀಮರು ದೋಚಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸಹಾಯಕ ಕಾರ್ಯಪಾಲಕ ಅನಂತ ಅವರಿಂದ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.