Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನವದೆಹಲಿಯಲ್ಲಿ ಮತದಾರರ ಗುರುತಿನ ಚೀಟಿ ಜೊತೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡದವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಇದು ಸ್ವ–ಇಚ್ಛೆಯಿಂದ ನಡೆಯುವ ಪ್ರಕ್ರಿಯೆ ಎಂದೂ ಹೇಳಿದೆ. ಮತದಾರರ ಗುರುತಿಗಾಗಿ ಅವರಿಂದ ಆಧಾರ್ ಸಂಖ್ಯೆ ಪಡೆಯಲು 2021ರ ಚುನಾವಣಾ ಕಾನೂನುಗಳ ಕಾಯ್ದೆಯು ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಅನುಮತಿ ನೀಡಿದೆ ಎಂದು ಕಾನೂನು ಸಚಿವ ಕಿರಣ್ ರಿಜಿಜು ಲೋಕಸಭೆಗೆ ತಿಳಿಸಿದ್ದಾರೆ.