Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ : ಮಹಾರಾಷ್ಟ್ರದ ಮುಂಬೈನ ಬಾಂದ್ರಾ ರೈಲ್ವೆ ಸ್ಟೇಷನ್ ನಲ್ಲಿ ವ್ಯಕ್ತಿಯೊಬ್ಬ ವಿದ್ಯಾರ್ಥಿನಿಯೊಬ್ಬನಿಗೆ ನಿದ್ರೆ ಬರುವ ಮಾತ್ರೆ ಮಿಕ್ಸ್ ಮಾಡಿದ ಚಹಾ ನೀಡಿ ಆತನ ವಸ್ತುಗಳನ್ನು ಕದ್ದ ಘಟನೆ ನಡೆದಿದೆ.
ಸಂತ್ರಸ್ತ ರೈಲಿಗಾಗಿ ಕಾಯುತ್ತಿದ್ದಾಗ ಅಲ್ಲಿಗೆ ಬಂದ ಆರೋಪಿ ಸಂತ್ರಸ್ತನನ್ನು ಪರಿಚಯ ಮಾಡಿಕೊಂಡು ನಿದ್ರೆ ಮಾತ್ರೆ ಹಾಕಿದ ಚಹಾವನ್ನು ನೀಡಿದ್ದಾನೆ.
ಇದನ್ನು ಸೇವಿಸಿದ ಸಂತ್ರಸ್ತ ಪ್ರಜ್ಞೆ ಕಳೆದುಕೊಂಡಾಗ ಆತನ ಬಳಿಯಿದ್ದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಸಂತ್ರಸ್ತ ಪ್ರಕರಣ ದಾಖಲಿಸಿದ ಹಿನ್ನಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.