Select Your Language

Notifications

webdunia
webdunia
webdunia
webdunia

ಪಕ್ಕದ‌ ಮನೆ ಅಂಕಲ್ ಕಾಮದ ಕಣ್ಣಿಗೆ ಯುವತಿ ಬಲಿ ,ಪಾದದ ಧೂಳಿನಿಂದ ಆರೋಪಿ ಅಂದರ್

young woman
bangalore , ಶನಿವಾರ, 12 ಆಗಸ್ಟ್ 2023 (12:00 IST)
ನಿನ್ನೆ ಮುಂಜಾನೆ ಮಹದೇಪುರದ ಮಹೇಶ್ವರಿ ನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನ ಮಹದೇವಪುರ ಪೊಲೀಸ್ರು ಕೆಲವೆ ಗಂಟೆಯಲ್ಲಿ ಪತ್ತೆ ಮಾಡಿದ್ದಾರೆ. ಮೃತದೇಹದ ಪಾದ ಕೊಟ್ಟ ಕ್ಲೂ, ಮತ್ತು ಪಕ್ಕದ ಮನೆ ಮಗುವಿನ ಹೇಳಿಕೆಯಿಂದ ಆರೋಪಿ ಲಾಕ್ ಆಗಿದ್ದಾನೆ. ಕೊಲೆ‌ ಮಾಡಿ ಬಾಡಿ ಬಿಸಾಕಿ ಏನೂ ಗೊತ್ತಿಲ್ಲದಂತೆ ಪಕ್ಕದ‌ ಮನೆ ಅಂಕಲ್ ಕೃಷ್ಣನನ್ನ ಮಹದೇವಪುರ ಪೊಲೀಸ್ರು ಬಂಧಿಸಿದ್ದಾರೆ.ರಾತ್ರಿ ಕೊಲೆ ಮಾಡಿ ಬಳಿಕ  ಬಾಡಿಯನ್ನ ಡ್ರಮ್ ವೊಂದರಲ್ಲಿ ಇಟ್ಟಿದ್ದ ಆರೋಪಿ ಬೆಳಗ್ಗೆ ಐದು ಗಂಟೆ ಸುಮಾರಿಗೆ ಮನೆ ಮುಂದೆ ಬಿಸಾಡಿದ್ದ.
 
ಧೂಳಿಲ್ಲದ ಪಾದ ನೋಡಿ ಪೊಲೀಸ್ರು ಡೌಟ್ ಪಟ್ಟಿದ್ರು. ರಾತ್ರಿ ಹುಡುಗಿ ಮಿಸ್ಸಿಂಗ್ ಅಂತ ದೂರು ಬಂದಿತ್ತು ಆದ್ರೆ ಯುವತಿಯ ಪಾದ ನೋಡಿ ಪೊಲೀಸ್ರು ಹುಡುಗಿ ಹೊರಗಡೆ ಹೋಗಿಲ್ಲ ಅನ್ನೋದನ್ನ ಕನ್ಫರ್ಮ್ ಮಾಡಿಕೊಂಡಿದ್ರು.‌ಯಾಕಂದ್ರೆ  ಯುವತಿಯ ಪಾದ ಕ್ಲೀನ್ ಇರೋದ್ರಿಂದ ಪಕ್ಕದಲ್ಲೇ ಯಾರೋ ಕೊಲೆ ಮಾಡಿ ಶವ ಬಿಸಾಕಿರೋ ಅನುಮಾನ ವ್ಯಕ್ತವಾಗಿತ್ತು‌. ಈ ವೇಳೆ ಅಕ್ಕಪಕ್ಕದ ಮನೆಯವ್ರ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಕೊಲೆಯಾದ ಮಹಾನಂದ  ಪಕ್ಕದ ಮನೆಯಲ್ಲಿಯೇ ಇದ್ದ ಆರೋಪಿ ಕೃಷ್ಣ ನ‌ ಮನೆಗೆ ಹೋಗಿದ್ದನ ಬಾಲಕಿಯೊಬ್ಳು ಪೊಲೀಸ್ರಿಗೆ ಮಾಹಿತಿ ನೀಡಿದ್ಳು. ಶವ ಪತ್ತೆಯಾಗಿ ಹಲವು ಗಂಟೆಗಳ ಕಾಲ ಕೃಷ್ಣ ಹೊರಗೇ ಬಂದಿರಲಿಲ್ಲ.ಈ ವೇಳೆ ತಮಗಿದ್ದ ಅನುಮಾನದ ಜೊತೆ ಮಗುವಿನ ಹೇಳಿಕೆ ಅನುಮಾನ ಹೆಚ್ಚಿಸಿದ್ರಿಂದ ಕೂಡಲೇ ಆರೋಪಿ ಕೃಷ್ಣ ವಶಕ್ಕೆ  ಪಡೆದಾಗ ವಿಚಾರ ಬಯಲಿಗೆ ಬಂದಿದೆ.
 
ಒಡಿಶಾ ಮೂಲದ ಕೃಷ್ಣ ಚಂದ ಸೇಟಿ ಟೆಕ್ ಪಾರ್ಕ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡ್ತಿದ್ದ.ಸ್ಟವ್ ಮೇಲೆ ಅನ್ನ ಮಾಡಲು ಪಾತ್ರೆ ಇಟ್ಟಿದ್ದ ಯುವತಿ ಮನೆಯಿಂದ ಹೊರಗೆ ಬಂದಿದ್ದಾಳೆ. ಈ ವೇಳೆ ಕೃಷ್ಣನ ಮನೆಯ ಬಾಗಿಲ ಬಳಿ ಮಹಾನಂದ  ಬಂದಾಗ ಅರೋಪಿ ಒಳಗೆ ಎಳೆದುಕೊಂಡಿದ್ದಾನೆ.ಯುವತಿಗೆ  ಅತ್ಯಾಚಾರ ಮಾಡಲು  ಆರೋಪಿ ಯತ್ನಿಸಿ ಯುವತಿಗೆ ಬಲವಂತವಾಗಿ ಮುತ್ತು ನೀಡಲು ಮುಂದಾಗಿದ್ದು,ಈ ವೇಳೆ ಯುವತಿ ನಿರಾಕರಿಸಿ ಕಿರುಚಾಡಲು ಯತ್ನಿಸಿದ್ದಾಳೆ. ಇದ್ರಿಂದ ಭಯಗೊಂಡ ಕೃಷ್ಣ ಹಿಂಬದಿಯಿಂದ ಮೂಗು ಬಾಯಿ ಒಂದು ಕೈನಲ್ಲಿ ಮುಚ್ಚಿಕೊಂಡು ಮತ್ತೊಂದು ಕೈನಿಂದ ಕುತ್ತಿಗೆ ಹಿಸುಕಿದ್ದಾನೆ. 
ಈ ವೇಳೆ ಕಿರುಚಾಡಲು ಸಾದ್ಯವಾಗದೆ ಉಸಿರುಗಟ್ಟಿ ಯುವತಿ ಸಾವನಪ್ಪಿದ್ದಾಳೆ.ಕೊಲೆ ಬಳಿಕ ಮನೆಯ ಬೆಡ್ ಶೀಟ್ ನಲ್ಲಿ ಸುತ್ತಿ  ಡ್ರಮ್ ನಲ್ಲಿ ಇಟ್ಟಿದ್ದ ಕೃಷ್ಣ ಮುಂಜಾನೆ ಮನೆ ಮುಂದೆ ಶವ ಬಿಸಾಡಿದ್ದ. ಸದ್ಯ ಅರೋಪಿ ಕೃಷ್ಣ ನನ್ನು ಬಂಧಿಸಿ ಪೊಲೀಸ್ರು ಹೆಚ್ಚಿನ  ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುಂಡಾ ಆಕ್ಟ್ ನಡಿ ಜೈಲು ಸೇರಿದ ಪುನೀತ್ ಕೆರೆಹಳ್ಳಿ