ಆನ್ ಲೈನ್ ಮೂಲಕ ಡ್ರಗ್ ಡಿಲೆವರಿ ಮಾಡ್ತಿದ್ದ ಗ್ಯಾಂಗ್ ನ ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ.ಸ್ಥಳೀಯರು, ಅಂತರ ರಾಜ್ಯದವರು ಹಾಗೂ ವಿದೇಶಿ ಮಹಿಳೆಯೊಬ್ಬಳು ಈ ಕೇಸ್ ನಲ್ಲಿ ಭಾಗಿಯಾಗಿದ್ದಾರೆ. ಮೊದಲಿಗೆ ಶೇಷಾದ್ರಿಪುರ ಪೊಲೀಸ್ರು
ಲೋಕಲ್ ಡ್ರಗ್ಸ್ ವ್ಯಸನಿಯನ್ನ ಬಂಧಿಸಿದ್ರು. ಬಳಿಕ ಆತನಿಗೆ ಸಪ್ಲೈ ಮಾಡುವ ಒರ್ವನ್ನು ಪತ್ತೆ ಮಾಡಿದ್ದಾರೆ. ನಂತ್ರ ಆತನಿಗೆ ಸಪ್ಲೈ ಆಗಿದ್ದ ಡ್ರಗ್ ಜಲಾವನ್ನ ಪತ್ತೆಮಾಡಿದ್ದಾರೆ.ಹೀಗೆ ಚೈನ್ ಲಿಂಕ್ ರೀತಿ ಸಾಹಿಲ್, ನಾಸಿರ್, ಆದಮ್ ಖಾನ್,ಸಮೀರ್ ನೈಜೀರಿಯಾ ಮೂಲದ ಹ್ಯಾಪಿನೆಸ್ ಎಂಬ ಮಹಿಳೆ ಸೇರಿ ಏಳು ಜನರು ಅರೆಸ್ಟ್ ಆಗಿದ್ದಾರೆ.ಮೊದಲು ಹಣವನ್ನು ಗೂಗಲ್ ಪೇ ಹಾಗು ಇತರ ಮಾದರಿಯಲ್ಲಿ ಪಡೆದು ಬಳಿಕ ಸ್ಥಳ ಒಂದರಲ್ಲಿ ಡ್ರಗ್ಸ್ ಇಟ್ಟು ಫೋಟೊ ಲೊಕೇಶನ್ ಕಳಿಸುತಿದ್ರು. ಹೀಗೆ ಒಬ್ಬರಿಗೆ ಒಬ್ಬರು ಬೇಟಿಯಾಗದೇ ಡ್ರಗ್ಸ್ ವ್ಯವಹಾರ ನಡೆಸುತಿದ್ದ ಅರೋಪಿಗಳು ದೆಹಲಿ ಯಿಂದ ಡ್ರಗ್ಸ್ ಪಡೆಯುತ್ತಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಹೀಗಾಗಿ ದೆಹಲಿ ಯಿಂದ ಯಾರು ಸಪ್ಲೆ ಮಾಡ್ತಿದ್ರು ಅವರನ್ನು ಪೊಲೀಸ್ರು ಹುಡುಕಾಟ ನಡೆಸುತ್ತಿದ್ದು,ಅರೋಪಿಗಳ ಬಳಿಯಿಂದ ಮುನ್ನೂರು ಗ್ರಾಂ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ.