Publish Date: Sat, 19 Feb 2022 (13:23 IST)
Updated Date: Sat, 19 Feb 2022 (13:31 IST)
ಬಿಹಾರದ ಮಧುಬನಿ ರೈಲ್ವೆ ಸ್ಟೇಶನ್ನಲ್ಲಿ ನಿಂತಿದ್ದ ಖಾಲಿ ರೈಲಿನಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.
ಬೆಳಗ್ಗೆ 9.50ರ ಹೊತ್ತಿಗೆ ಸ್ವತಂತ್ರ ಸೇನಾನಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿಗೆ ಬೆಂಕಿ ತಗುಲಿ ಹೊತ್ತಿ ಉರಿದಿದೆ. ರೈಲಿನಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಯಾವುದೇ ಸಾವು-ನೋವಿನ ವರದಿಯಾಗಿಲ್ಲ.
ಬೆಂಕಿ ಉರಿದು, ದಟ್ಟವಾದ ಹೊಗೆ ಆವರಿಸಿದ್ದ ರೈಲಿನ ವಿಡಿಯೋ ವೈರಲ್ ಆಗಿದೆ. ಅಲ್ಲಿನ ಸಿಬ್ಬಂದಿ ಬಕೆಟ್ಗಳ ಮೂಲಕ ನೀರು ಹಾಕಿ ಬೆಂಕಿ ನಂದಿಸುವ ಯತ್ನ ಮಾಡಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಈ ಸ್ವತಂತ್ರ ಸೇನಾನಿ ಎಕ್ಸ್ಪ್ರೆಸ್ ಬಿಹಾರದ ಜಯನಗರದಿಂದ ದೆಹಲಿಗೆ ಸಂಚರಿಸುವ ರೈಲು.
Ramya kosira
Publish Date: Sat, 19 Feb 2022 (13:23 IST)
Updated Date: Sat, 19 Feb 2022 (13:31 IST)