Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಪಟನಾ : ಗಣತಿ, ಚುನಾವಣೆ, ಬಿಸಿಯೂಟ ಹೀಗೆ ಮೊದಲೇ ನಾನಾ ಕಾರ್ಯಗಳಲ್ಲಿ ವ್ಯಸ್ತರಾಗಿರುವ ಶಾಲಾ ಶಿಕ್ಷಕರಿಗೆ ಬಿಹಾರದಲ್ಲಿ ಹೊಸತೊಂದು ಜವಾಬ್ದಾರಿ ಹೆಗಲಿಗೆ ಬಿದ್ದಿದೆ.
ಅದು - ಕುಡುಕರನ್ನು ಹಿಡಿಯುವುದು! ಬಿಹಾರದಲ್ಲಿ 2016ರಿಂದ ಸಂಪೂರ್ಣ ಪಾನನಿಷೇಧ ಜಾರಿಯಲ್ಲಿದೆ. ರಾಜ್ಯದಲ್ಲಿ ಎಲ್ಲೂ ಅಕ್ರಮ ಅಥವಾ ಸಕ್ರಮ ಮದ್ಯ ಸಿಗುವಂತಿಲ್ಲ. ಆದರೂ ಶಾಲೆಗಳ ಕಾಂಪೌಂಡ್ ಸೇರಿದಂತೆ ಅನೇಕ ಕಡೆ ಕುಡಿದು ಎಸೆದ ಸಾರಾಯಿ ಬಾಟಲಿಗಳು ಸಿಗುತ್ತಿವೆ. ಜನರು ಕುಡಿದು ತೂರಾಡುವುದು ಅಲ್ಲಲ್ಲಿ ಕಂಡುಬರುತ್ತಿದೆ.
ಹೀಗಾಗಿ ಯಾರು ಕುಡಿಯುತ್ತಾರೆ ಮತ್ತು ಅವರಿಗೆ ಯಾರು ಮದ್ಯ ಮಾರಾಟ ಮಾಡುತ್ತಾರೆ ಎಂಬುದನ್ನು ಪತ್ತೆಹಚ್ಚುವಂತೆ ರಾಜ್ಯ ಶಿಕ್ಷಣ ಇಲಾಖೆಯು ಜಿಲ್ಲಾ ಶಿಕ್ಷಣ ಅಧಿಕಾರಿಗಳು, ಪ್ರಿನ್ಸಿಪಾಲ್ಗಳು, ಶಿಕ್ಷಕರು ಮತ್ತು ಶೈಕ್ಷಣಿಕ ಕ್ಷೇತ್ರದ ಸ್ವಯಂಸೇವಕರಿಗೆ ಆದೇಶ ನೀಡಿದೆ.
ಅದರಂತೆ ಅವರು ಇನ್ನುಮುಂದೆ ಕುಡುಕರನ್ನೂ, ಮದ್ಯದ ವ್ಯಾಪಾರಿಗಳನ್ನೂ ಪತ್ತೆಹಚ್ಚಿ ಸರ್ಕಾರದ ಪಾನನಿರೋಧ ಟೋಲ್ಫ್ರೀ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕಿದೆ.