Publish Date: Sun, 19 Aug 2018 (18:32 IST)
Updated Date: Sun, 19 Aug 2018 (18:34 IST)
ಅನುಮಾನಾಸ್ಪದ ರೀತಿಯಲ್ಲಿ ಯುವತಿಯೊಬ್ಬಳ ಶವ ಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕಬ್ಬನ್ ಪಾರ್ಕನಲ್ಲಿ 18 ವರ್ಷದ ಯುವತಿಯೊಬ್ಬಳ ಶವ ಪತ್ತೆಯಾಗಿದೆ. ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಮೃತಳನ್ನು ಸಂತೋಷಿ ಎಂದು ಗುರುತಿಸಲಾಗಿದೆ.
ದುಪ್ಪಟ್ಟದಿಂದ ಸಂತೋಷಿ ತಾನೇ ಆತ್ಮಹತ್ಮೆ ಮಾಡಿಕೊಂಡಿರಬೇಕು ಎನ್ನಲಾಗುತ್ತಿದೆ. ಉದ್ಯಾನವನ ಸಿಬ್ಬಂದಿ ಬೆಳಗ್ಗೆ ಯುವತಿಯ ಶವ ಗಮನಿಸಿದ್ದಾರೆ. ಕಬ್ಬನ್ ಪಾರ್ಕ ಠಾಣೆ ಪೊಲೀಸ್ ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವತಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಥವಾ ಬೇರೆ ಕಾರಣವೇನಾದರೂ ಇದೆಯಾ? ಎಂಬುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.