ನವದೆಹಲಿ : ಯೋಗ ಗುರು ಬಾಬಾ ರಾಮ್ ದೇವ್ ಒಡೆತನದ ಪತಂಜಲಿ ಕಂಪೆನಿ ಗೂಗಲ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೌದು. ಪತಂಜಲಿ ಸಂಸ್ಥೆಯ ಕಿಂಬೋ ಪ್ರಾಯೋಗಿಕ ಆವೃತ್ತಿಯು ಗುರುವಾರ ಪ್ಲೇ ಸ್ಟೋರ್‌ಗೆ ಬಂದಿತ್ತು. ಅಧಿಕೃತವಾಗಿ ಇದು ಆ.27 ರಂದು ಬಿಡುಗಡೆಯಾಗಲಿದೆ ಎಂದು ಸಂಸ್ಥೆ ಹೇಳಿತ್ತು. ಆದರೆ ದೇಸಿ ವಾಟ್ಸಾಪ್ ಎಂದೇ ಹೇಳಲಾಗುವ 'ಕಿಂಬೊ' ಗೂಗಲ್ ಪ್ಲೇಸ್ಟೋರ್ ನಿಂದ ಮತ್ತೆ ನಾಪತ್ತೆಯಾಗಿದೆ.
ಇದರಿಂದ ತೀವ್ರ ಆಕ್ರೋಶಗೊಂಡ ರಾಮ್ ದೇವ್ ಕಂಪನಿ, ಇದು ಸ್ವದೇಶಿ ಸಂಸ್ಥೆ ವಿರುದ್ಧ ವಿದೇಶಿ ಕಂಪನಿಗಳು ನಡೆಸಿರುವ ಹುನ್ನಾರ ಎಂದುಹೇಳಿದೆ. ಪ್ಲೇ ಸ್ಟೋರ್‌ನಿಂದ ಕಿಂಬೊವನ್ನು ತೆಗೆದುಹಾಕಿದ್ದು ಏಕೆ.? ನಾವು ಗೂಗಲ್ ಜತೆ ಮಾತುಕತೆ ನಡೆಸಿದ್ದೇವೆ. ನಮ್ಮ ಇಮೇಲ್‌ಗೆ ಈವರೆಗೂ ಪ್ರತಿಕ್ರಿಯೆ ಬಂದಿಲ್ಲ .ಕಾರಣವೇನು? ಎಂದು ಪತಂಜಲಿ ಆಯುರ್ವೇದ್ ವಕ್ತಾರ ಎಸ್.ಕೆ. ತಿಜರಾವಾಲಾ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ