Publish Date: Mon, 05 Sep 2022 (11:40 IST)
Updated Date: Mon, 05 Sep 2022 (11:42 IST)
ಮೈಸೂರು : ಹಾಲ್ ಟಿಕೆಟ್ ಸಿಗದೇ ಇದ್ದದ್ದಕ್ಕೆ ಯುವತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ಜಯಲಕ್ಷ್ಮಿ ಪುರಂನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸುವುದಕ್ಕೂ ಮುನ್ನ ವೀಡಿಯೋ ಮಾಡಿರುವ ತನ್ಮಯಾ ತನ್ನ ಸಾವಿಗೆ ಸೆಂಟ್ ಜೋಸೆಫ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳೇ ಕಾರಣ ಎಂದು ಆರೋಪಿಸಿದ್ದಾಳೆ.
ನನಗೆ ಕಾಲೇಜಿನಲ್ಲಿ ತುಂಬಾ ತೊಂದರೆಯಾಗುತ್ತಿದೆ. ನಮ್ಮ ಕಾಲೇಜಿನಲ್ಲಿ ತುಂಬಾ ತಾರತಮ್ಯ ನಡೆಯುತ್ತಿದೆ. ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ತರಗತಿಗಳಿಗೆ ಹಾಜರಾಗಿದ್ದರೂ ಹಾಜರಾತಿ ನೀಡುತ್ತಿಲ್ಲ.
ದುಡ್ಡು ತೆಗೆದುಕೊಂಡು ಹಾಲ್ ಟಿಕೆಟ್ ಕೊಡುತ್ತಾರೆ. ಹಣ ಕೊಟ್ಟಿದ್ದಕ್ಕೆ ಯಾವುದೇ ರಶೀದಿ ನೀಡುತ್ತಿಲ್ಲ. ಡಿಟೇನ್ ಮಾಡಿದರೆ ಒಂದು ವರ್ಷ ಹಾಳಾಗುತ್ತದೆ ಅಂದರೂ ನಮ್ಮ ಮಾತು ಕೇಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾಳೆ.