Publish Date: Thu, 01 Sep 2022 (21:11 IST)
Updated Date: Thu, 01 Sep 2022 (21:15 IST)
ಗಂಡ-ಹೆಂಡತಿಯ ನಡುವೆ ಜಗಳವಾದ ಹಿನ್ನೆಲೆಯಲ್ಲಿ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ತಾಲೂಕಿನ ಅನುಪನಹಳ್ಳಿಯಲ್ಲಿ ನಡೆದಿದೆ. ಗೌರಮ್ಮ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಗೌರಮ್ಮ ಒಂದು ವರ್ಷದ ಹಿಂದೆಯಷ್ಟೇ ರವಿತೇಜ ಎಂಬಾತನ ಜೊತೆ ಮದುವೆಯಾಗಿದ್ದಳು. ಅನುಪನಹಳ್ಳಿಯ ನಿವಾಸಿ ರವಿತೇಜ, ತುಮಕೂರು ಹೊರವಲಯದ ಮಂಚಗೊಂಡನಹಳ್ಳಿಯ ಗೌರಮ್ಮ ಇಬ್ಬರು ವಿವಾಹವಾಗಿದ್ರು. ಗೌರಮ್ಮಗೆ ತಂದೆ-ತಾಯಿ ಇಲ್ಲದ ಕಾರಣ ಚಿಕ್ಕಮ್ಮನೇ ಸಾಕಿ ಮದುವೆ ಮಾಡಿಕೊಟ್ಟಿದ್ದರು. ತುಮಕೂರಿನ ಯಲ್ಲಾಪುರದ ಗಾರ್ಮೆಂಟ್ಸ್‌ವೊಂದರಲ್ಲಿ ರವಿತೇಜ ಕೆಲಸ ಮಾಡುತ್ತಿದ್ದ. ಗೌರಮ್ಮ ಪರಿಶಿಷ್ಟ ಜಾತಿಯಾದ ಕಾರಣ ರವಿತೇಜ ನಿತ್ಯವೂ ಗಲಾಟೆ ಮಾಡಿ ಕಿರುಕುಳ ನೀಡುತ್ತಿದ್ದನಂತೆ. ಇದರಿಂದ ಮನನೊಂದು ಗೌರಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.