ರಾಜಧಾನಿಯಲ್ಲಿ ರಾಜ್ಯದ ಮೊದಲ ಹೈಟೆಕ್ ಕಾರ್ ಪಾರ್ಕ್ ಫೆ. 27ರಂದು ಉದ್ಘಾಟನೆಗೊಳ್ಳಲಿದೆ.
ಬೊಮ್ಮನಹಳ್ಳಿಯಲ್ಲಿ ಉದ್ಘಾಟನೆಯಾಗಲಿರುವ ರಾಜ್ಯದ ಮೊದಲ “ಕಾರ್ ಪಾರ್ಕ್” ಹೈಟೆಕ್ ಆಗಿದೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಸ ಹಾಗೂ ಕಸದ ಕೊಂಪೆಯನ್ನು ಸ್ವರ್ಗಗೊಳಿಸಲು ಯತ್ನಿಸಲಾಗಿದೆ ಎಂದು ಬಿಬಿಎಂಪಿ ಸದಸ್ಯ ರಾಮ್ ಮೋಹನರಾಜು ಹೇಳಿದ್ದಾರೆ.
ಹಲವಾರು ವರ್ಷಗಳಿಂದ ಸಮರ್ಪಕವಾಗಿ ಬಳಕೆಯಾಗದೇ ಇದ್ದ ಜಾಗವನ್ನು ರಾಜ್ಯದಲ್ಲೆ ಹೆಸರುವಾಸಿಯಾಗುವಂತೆ ಮಾಡಬೇಕು ಎನ್ನುವ ಗುರಿಯಿತ್ತು. ಶಾಸಕ ಸತೀಶ್ ರೆಡ್ಡಿ, ಸಂಸದರಾಗಿದ್ದ ದಿವಂಗತ ಅನಂತ ಕುಮಾರ್ ಸಹಕಾರ acನೀಡಿದ್ದಾರೆ ಎಂದರು. ವಾರ್ಡ್ ನ ಜನರು ಮೂಲಭೂತ ಸೌಕರ್ಯಗಳ ಜೊತೆಯಲ್ಲಿಯೇ ಆರೋಗ್ಯಕರವಾದ ಜೀವನ ಶೈಲಿಯನ್ನು ಬೆಳೆಸಿಕೊಳ್ಳುವಂತೆ ಮಾಡುವುದು ನಮ್ಮ ಗುರಿಯಾಗಿತ್ತು ಎಂದ ಅವರು, ಯುವ ಜನರಲ್ಲಿ ಮೊಬೈಲ್ ಗೀಳನ್ನು ಬಿಡಿಸಿ ದೈಹಿಕ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಬೇಕು.
ಈ ಹಿನ್ನಲೆಯಲ್ಲಿ ಮಕ್ಕಳಾಟಕ್ಕೆ ಅಗತ್ಯವಾದ ಸಲಕರಣೆಗಳು. ಒಪನ್ ಜಿಮ್ ಹಾಗೂ ಕಲಾವಿದರ ಪ್ರೋತ್ಸಾಹಕ್ಕೆ ಬಯಲು ರಂಗಮಂದಿರ ನಿರ್ಮಿಸಿದ್ದೇವೆ ಎಂದರು.