ಮುಂಬೈ: ಮಹಿಳೆಯರ ಬಗ್ಗೆ ಖಾಸಗಿ ವಾಹಿನಿ ಶೋನಲ್ಲಿ ಅಸಭ್ಯವಾಗಿ ಕಾಮೆಂಟ್ ಮಾಡಿದ ತಪ್ಪಿಗೆ ಟೀಂ ಇಂಡಿಯಾದಿಂದ ಅಮಾನತುಗೊಂಡಿರುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಶಾಕ್ ಸಿಕ್ಕಿದೆ.
ಹಾರ್ದಿಕ್ ಪಾಂಡ್ಯ ಮುಂಬೈನ ಪ್ರತಿಷ್ಠಿತ ಖರ್ ಜಿಮ್ಕಾನಾ ಜಿಮ್ ನ ಮೆಂಬರ್ ಶಿಪ್ ಹೊಂದಿದ್ದರು. ಆದರೆ ಇದೀಗ ಅವರ ಮೇಲೆ ಆಪಾದನೆ ಬಂದಿರುವ ಹಿನ್ನಲೆಯಲ್ಲಿ ಜಿಮ್ ಸದಸ್ಯತ್ವ ಕಳೆದುಕೊಂಡಿದ್ದಾರೆ.
ಜಿಮ್ ಆಡಳಿತ ಮಂಡಳಿ ಸಭೆಯಲ್ಲಿ ಹಾರ್ದಿಕ್ ಅವರ ಸದಸ್ಯತ್ವ ರದ್ದುಗೊಳಿಸಲು ತೀರ್ಮಾನಿಸಲಾಗಿದೆ. ಹಾರ್ದಿಕ್ ಪಾಂಡ್ಯ ಜತೆಗೆ ಈ ಶೋನಲ್ಲಿ ಭಾಗವಹಿಸಿದ್ದ ಕೆಎಲ್ ರಾಹುಲ್ ಕೂಡಾ ಅಮಾನಗೊಂಡಿದ್ದರು. ಇವರಿಬ್ಬರೂ ಇದೀಗ ಬಿಸಿಸಿಐ ತನಿಖಾ ಸಮಿತಿ ಮುಂದೆ ವಿಚಾರಣೆಗೊಳಪಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ