ಸ್ಕೈವಾಕ್ ನಿರ್ಮಾವಾಗಿ ವರ್ಷವಾದ್ರೂ ಉದ್ಘಾಟನೆ ಭಾಗ್ಯ ಇಲ್ಲ.ಸ್ಕೈವಾಕ್ ಇಲ್ಲದೇ ಭಯದಲ್ಲೇ ಜನರು ರಸ್ತೆ ದಾಟುತ್ತಿದ್ದಾರೆ. ರಾಜಾಜಿನಗರ -ಮೆಜೆಸ್ಟಿಕ್ ಸಂಪರ್ಕ ಕಲ್ಪಿಸುವ ರಸ್ತೆಯ ಪರಿಸ್ಥಿತಿ ಇದ್ದಾಗಿದ್ದು , ಬೆಂಗಳೂರಲ್ಲಿ ಬಿಬಿಎಂಪಿ ಟ್ರಾಫಿಕ್ ಸೆಲ್ ನಿದ್ದೆ ಮಾಡ್ತಿದ್ಯಾ ಅಂತ ಜನ ಸಾಮಾನ್ಯರು ಪ್ರಶ್ನೆ ಮಾಡ್ತಿದ್ದಾರೆ.ಸ್ಕೈ ವಾಕ್ ರೆಡಿಯಾಗಿ ಒಂದು ವರ್ಷವಾದ್ರೂ ಹಾಗೇ ತುಕ್ಕು ಹಿಡಿತಾಯಿದೆ.1.5 ಕೋಟಿ ವೆಚ್ಚದಲ್ಲಿ ಸ್ಕೈ ವಾಕ್ ನಿರ್ಮಾಣವಾಗಿದೆ.ಲಿಫ್ಟ್ ವ್ಯವಸ್ಥೆ ಒಂದೇ ಪೆಂಡಿಂಗ್ ಇದ್ರೂ ಇನ್ನು ಸ್ಕೈ ವಾಕ್ ಓಪನ್ ಮಾಡಿಲ್ಲ.ರಸ್ತೆಯ ಡಿವೈಡರ್ ಕಿತ್ತಿದ್ದು ಅದರ ಮೂಲಕ ಜನರು ಓಡಾಟ ನಡೆಸ್ತಿದ್ದಾರೆ.
ಯಾವಾಗ ಯಾರ ಪ್ರಾಣ ಪಕ್ಷಿ ರಸ್ತೆಗೆ ಬೀಳುತ್ತೋ ಅಂತಾ ಆತಂಕ ಎದುರಾಗಿದೆ.ಜೀವ ಕೈಯಲ್ಲಿಡಿದು ಪಾದಚಾರಿಗಳು ಓಡಾಟ ನಡೆಸ್ತಿದ್ದಾರೆ.