ಅಪಘಾತ ನಡೆದು ತಲೆಗೆ ಏಟಾದರೆ ಸೂಕ್ತ ಚಿಕಿತ್ಸೆ ನೀಡುವ ಸೌಕರ್ಯ ಕಡಿಮೆ ಇರುವುದರಿಂದ ದ್ವಿಚಕ್ರ ವಾಹನ ಸವಾರರು ಎಚ್ಚರಿಕೆ ವಹಿಸಬೇಕು ಎಂದು ತಜ್ಞ ವೈದ್ಯರು ಹೇಳಿದ್ದಾರೆ.
ಅಪಘಾತಗಳು ಸಂಭವಿಸಿದಾಗ ತಲೆಗೆ ಪೆಟ್ಟು ಬೀಳುವ ಸಂಭವ ಹೆಚ್ಚಾಗಿರುತ್ತೆ. ತಲೆಗೆ ಪೆಟ್ಟು ಬಿದ್ದಾಗ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಸಂಖ್ಯೆ ಸಹ ಕಡಿಮೆಯಿದೆ. ನ್ಯೂರೋ ಸರ್ಜನ್ಸ್ ಇಲ್ಲದೇ ಇದ್ದಾಗ ಸಮಸ್ಯೆ ಹೆಚ್ಚಾಗುತ್ತೆ. ಹೆಡ್ ಇಂಜ್ಯೂರಿ ಆದಾಗ ಅದನ್ನ ಟ್ರೀಟ್ ಮಾಡಲು ಎಲ್ಲಾ ವೈದ್ಯರಿಗೂ ಸಾಧ್ಯವಾಗದೇ ಇರೋದು ಕೂಡಾ ಸಮಸ್ಯೆ. ಹಾಗಾಗಿ ಆದಷ್ಟು ಎಚ್ಚರ ವಹಿಸಬೇಕೆಂದು ತಜ್ಞ ವೈದ್ಯರಾದ ಡಾ ಗೌತಮ್ ಎಂ ಎಸ್ ಸಲಹೆ ನೀಡಿದ್ದಾರೆ.