ಸ್ಪಾ ಅಂತ ಹೆಸರು ಹಾಕಿಕೊಂಡು ನಡೆಸುತ್ತಿದ್ದ ವೇಶ್ಯಾವಾಟಿಕೆ ದಂಧೆ ಬಯಲಾಗಿದೆ.
ಮೂರು ಸ್ಪಾ ಗಳ ಮೇಲೆ ಪೊಲೀಸರು ತಂಡಗಳನ್ನು ರಚಿಸಿಕೊಂಡು ದಾಳಿ ನಡೆಸಿದ್ದಾರೆ. ದಾಳಿ ವೇಳೆ ವೇಶ್ಯಾವಾಟಿಕೆ ನಡೆಸುತ್ತಿದ್ದ 9 ಮಹಿಳೆಯರು ಸೇರಿದಂತೆ ಒಟ್ಟು 19 ಜನರನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಬಂಧಿತರಿಂದ 24 ಮೊಬೈಲ್ ಫೋನ್ ಗಳು ಹಾಗೂ 16 ಸಾವಿರ ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಂದ್ಹಾಗೆ ಈ ಘಟನೆ ನಡೆದದ್ದು ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ.