Publish Date: Thu, 20 Apr 2023 (14:40 IST)
Updated Date: Thu, 20 Apr 2023 (15:18 IST)
ಸಚಿವ ಆರ್. ಅಶೋಕ್ಗೆ ಕನಕಪುರದಲ್ಲಿ ಮಿಲಿಟರಿ ಹೊಟೇಲ್ಗೆ ಬಂದು ಹೋಗಿ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ತಿರುಗೇಟು ನೀಡಿದ್ದಾರೆ.. KPCC ಅಧ್ಯಕ್ಷ D.K. ಶಿವಕುಮಾರ್ ಸೋಲಿಸಲು ಬಿಜೆಪಿ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದು, ಕನಕಪುರದಲ್ಲಿ ಡಿಕೆಶಿ ವಿರುದ್ಧ ಸಚಿವ ಆರ್. ಅಶೋಕ್ರನ್ನು ಕಣಕ್ಕಿಳಿಸಿದೆ.. ಇದಕ್ಕೆ ಡಿಕೆಶಿ ಪ್ರತಿಕ್ರಿಯಿಸಿ, ಯಾರೇ ಬಂದ್ರೂ ಸ್ವಾಗತ.. ಕನಕಪುರದಲ್ಲಿ ಒಳ್ಳೆ ಮಿಲಿಟರಿ ಹೋಟೆಲ್ ಇವೆ.. ಒಳ್ಳೆ ಆತಿಥ್ಯ ಸಿಗಲಿದೆ ಎಂದಿದ್ರು. ಈ ಹೇಳಿಕೆಗೆ ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ನಮ್ಮ ಪ್ರಚಾರ ಮಿಲಿಟರಿ ಹೊಟೇಲಿಂದಲೇ ಆರಂಭವಾಗುತ್ತೆ.. ಅಲ್ಲಿ ಸ್ಥಳೀಯ ಸಾಮಾನ್ಯ ಜನ ಇರ್ತಾರೆ.. ಅಂಥ ಸಾಮಾನ್ಯ ಜನರನ್ನು ಡಿಕೆಶಿ ಭೇಟಿ ಮಾಡಲ್ಲ.. ಸಾಮಾನ್ಯ ಜನರನ್ನು ಭೇಟಿ ಮಾಡೋದಿಕ್ಕೆ ಅಶೋಕ್ ಹೋಗಿದ್ದಾರೆ.. ಇದರಲ್ಲಿ ಏನ್ ತಪ್ಪಿದೆ? ಯಾಕೆ ಮಿಲಿಟರಿ ಹೊಟೇಲ್ಗೆ ಹೋಗಬಾರದು ಎಂದು ಪ್ರಶ್ನಿಸಿ ಕಿಡಿಕಾರಿದ್ರು