Publish Date: Thu, 20 Apr 2023 (14:03 IST)
Updated Date: Thu, 20 Apr 2023 (15:16 IST)
ಹೊಳೆನರಸೀಪುರ ಕ್ಷೇತ್ರದಲ್ಲಿ ಶಾಸಕ ಪ್ರೀತಂಗೌಡ ನಾಮಪತ್ರ ಸಲ್ಲಿಕೆ ಮಾಡ್ತಾರೆ ಎಂಬ ವಿಚಾರ ಎಲ್ಲೆಡೆ ಚರ್ಚೆಯಾಗ್ತಿದೆ. ಹೀಗಾಗಿ ಹೊಳೆನರಸೀಪುರ ಬಿಜೆಪಿ ಘೋಷಿತ ಅಭ್ಯರ್ಥಿ ದೇವರಾಜೇಗೌಡ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವರಾಜೇಗೌಡ, ಬೆಳಗ್ಗೆಯಿಂದ ಬಿಜೆಪಿ ವಲಯದಲ್ಲಿ ಪ್ರೀತಂಗೌಡ ಸ್ಪರ್ಧೆ ವಿಚಾರ ಚರ್ಚೆಯಾಗ್ತಿದೆ.. ಪ್ರೀತಂಗೌಡ್ರೇ ನನಗೆ ಕರೆ ಮಾಡಿದ್ರು, ನಾನು ನಾಮಿನೇಶನ್ ಹಾಕ್ತೇನೆ ಅಂದ್ರು.. ಬಹಳ ಸಂತೋಷದಿಂದ ಒಪ್ಪಿಕೊಂಡು, ಸ್ವಾಗತ ಮಾಡಿದ್ದೇನೆ.. ಯಾವುದೇ ಕ್ಷಣದಲ್ಲಾದ್ರೂ ಹೈಕಮಾಂಡ್ನಿಂದ ಕರೆ ಬಂದ್ರೆ ಕಣದಿಂದ ಹಿಂದೆ ಸರಿಯುವೆ, ಪಕ್ಷದ ವರಿಷ್ಠರು ಏನು ಹೇಳ್ತಾರೆ ಹಾಗೆ ಮಾಡ್ತೇನೆ ಎಂದಿದ್ದಾರೆ.