ಗ್ಯಾರಂಟಿಗಳ ಖುಷಿ ಬೆನ್ನಲ್ಲೇ ಜನ ಸಾಮಾನ್ಯನಿಗೆ ದರ ಏರಿಕೆ ಶಾಕ್ ನೀಡಿದೆ. ಒಂದೆಡೆ ವಿದ್ಯುತ್ ಬಿಲ್ ಏರಿಕೆಯಾಗಿದ್ದು, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಕೂಡ ಏರಿಕೆಯಾಗಿವೆ. ದಿನನಿತ್ಯ ಬಳಕೆ ವಸ್ತುಗಳ ದರ ಗಗನಕ್ಕೇರುತ್ತಿದ್ದು, ತರಕಾರಿ, ದಿನಸಿ ಐಟಂಗಳು ಜೇಬು ಸುಡುತ್ತಿವೆ. ಅತ್ತ ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಹೊಟೇಲ್ ಮಾಲೀಕರೂ ಜನಸಾಮಾನ್ಯರಿಗೆ ಶಾಕ್ ನೀಡಿದ್ದಾರೆ. ವಿದ್ಯುತ್ ದರ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟ ಹೊಟೇಲ್ ಉದ್ಯಮ ಸದ್ಯದಲ್ಲೇ ಹೊಟೇಲ್ ತಿಂಡಿ,ತಿನಿಸುಗಳ ಬೆಲೆಯನ್ನ ಏರಿಸಲಿವೆ.ವಿದ್ಯುತ್, ಅಕ್ಕಿ, ಕಾಳು, ಸೊಪ್ಪು, ತರಕಾರಿ ದರ ಏರಿಕೆಯಾಗಿರುವ ಹಿನ್ನೆಲೆ, ಹೋಟೆಲ್ಗಳಲ್ಲಿ ಕಾಫಿ, ಟೀ, ತಿಂಡಿಗಳ ಬೆಲೆ ಏರಿಕೆಯಾಗಲಿದೆಯೆಂದು ಹೋಟೆಲ್ ಮಾಲೀಕರು ಹೇಳುತ್ತಿದ್ದಾರೆ. ದರ ಏರಿಕೆಯ ಹೊಡೆತದಿಂದ ಬೆಲೆ ಹೆಚ್ಚಿಸಲಿದ್ದೇವೆಂದು ಹೋಟೆಲ್ನ ಮಾಲೀಕರು ತಿಳಿಸಿದ್ದಾರೆ.