Publish Date: Fri, 23 Aug 2019 (19:29 IST)
Updated Date: Fri, 23 Aug 2019 (19:31 IST)
ನಾಡಹಬ್ಬ ಮೈಸೂರು ದಸರಾ 2019 ರ ಗಜ ಪಯಣಕ್ಕೆ ಚಾಲನೆಯನ್ನು ಸಚಿವ ವಿ.ಸೋಮಣ್ಣ ನೀಡಿದ್ರು.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 2019ರ ಗಜ ಪಯಣ ಕಾರ್ಯಕ್ರಮಕ್ಕೆ ಸಚಿವರಾದ ವಿ. ಸೋಮಣ್ಣ ಚಾಲನೆ ನೀಡಿದರು.
ಸಚಿವರಾದ ಆರ್. ಅಶೋಕ್ ಅವರ ಜೊತೆಗೂಡಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರನ ಹೊಸಹಳ್ಳಿಯಲ್ಲಿ ವಿದ್ಯುಕ್ತವಾಗಿ ಗಜ ಪಡೆ ಪಯಣ ಸಮಾರಂಭ ಉದ್ಘಾಟಿಸಿದ್ರು.
ಮೈಸೂರಿನ ಮಹಾಪೌರರು, ಶಾಸಕ ರಾಮದಾಸ್ , ನಿರಂಜನ್ ಹಾಗೂ ಹಲವಾರು ಸ್ಥಳೀಯ ನಾಯಕರಿದ್ರು.