Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಂಗಗಳ ಹಾವಳಿಗೆ ತತ್ತರಿಸಿದ್ದ ಜನರೀಗ ಖುಷ್

ಮಂಗಗಳ ಹಾವಳಿಗೆ ತತ್ತರಿಸಿದ್ದ ಜನರೀಗ ಖುಷ್
ಚಿತ್ರದುರ್ಗ , ಬುಧವಾರ, 18 ಜುಲೈ 2018 (17:30 IST)
ಓಡಾಡಲು ಸಾಧ್ಯವಿಲ್ಲದಂತೆ ಮೈ ಮೇಲೆ ಎರಗುತ್ತಿದ್ದ ಕೋತಿಗಳ ಹಾವಳಿಯಿಂದ ಆ ಊರಿನ ಜನರು ಕೆಲ ದಿನಗಳಿಂದ ನೆಮ್ಮದಿಯನ್ನೇ ಕಳೆದುಕೊಂಡಿದ್ದರು. ಕೊನೆಗೂ ಕೋತಿಗಳ ಹಾವಳಿಗೆ ಬ್ರೇಕ್ ಬಿದ್ದಿದೆ. ಈಗ ಜನರು ಖುಷ್ ಆಗಿದ್ದಾರೆ. 

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಮಂಗಗಳ ಹಾವಳಿಯಿಂದ ತತ್ತರಿಸಿದ್ದ ಜನತೆ ಈಗ ಖುಷ್ ಆಗಿದ್ದಾರೆ. ಕಳೆದ ಒಂದು ವಾರದ ಹಿಂದೆ ಬಾಲಕನೊಬ್ಬನನ್ನು ಕಚ್ಚಿ ಗಾಯಗೊಳಿಸಿದ್ದ ಮಂಗ, ಓಡಾಡಲು ಸಾಧ್ಯವಿಲ್ಲದಂತೆ ಜನರನ್ನು ಹೈರಾಣಾಗಿಸಿದ್ದವು. ಕೋತಿಗಳ ಉಪಟಳ ತಾಳಲಾರದೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

ಸಾರ್ವಜನಿಕರಿಂದ ಬಂದ ದೂರಿಗೆ ಸ್ಪಂದಿಸಿದ  ಪುರಸಭೆ ಅಧಿಕಾರಿಗಳು, ಬೋನಿಟ್ಟು ಸುಮಾರು 90 ಮಂಗಗಳನ್ನು ಹಿಡಿದರು.  ಮಂಗಗಳನ್ನು ಹಿಡಿಯಲು ಪಕ್ಕದ ರಾಜ್ಯದಿಂದ ಸಂಬಂಧಿಸಿದವರನ್ನು ಕರೆಸಿದ ಅಧಿಕಾರಿಗಳು ಕೋತಿಗಳನ್ನು ಹಿಡಿದರು. ಹಿಡಿದಿರುವ ಮಂಗಗಳನ್ನು ದೂರದ ಕಾಡಿಗೆ ಬಿಟ್ಟು ಬರುವ ತೀರ್ಮಾನವನ್ನು ಪುರಸಭೆ ಅಧಿಕಾರಿಗಳು ಕೈಗೊಂಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಬಿರುಗಾಳಿ ಎಬ್ಬಿಸಲಿದೆ ನೋಕಿಯಾ...!