ಒಂದು ಕಾಲದಲ್ಲಿ ಮೊಬೈಲ್ ಫೋನ್ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿದ ನೋಕಿಯಾ ಇದೀಗ ಎಚ್‌ಎಮ್‌ಡಿ ಗ್ಲೋಬಲ್ ಕಂಪನಿಯೊಂದಿಗೆ ವೀಲಿನಗೊಂಡಿರುವುದು ಎಲ್ಲರಿಗೂ ತಿಳಿದಿರುವುದೇ. ಈಗಾಗಲೇ ಈ ಕಂಪನಿಯೊಂದಿಗೆ ಸೇರಿ ನೋಕಿಯಾ ತನ್ನ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುತ್ತಿದ್ದು ಮತ್ತೆ ತನ್ನ ಹಳೆಯ ವರ್ಚಸ್ಸು ಪಡೆದುಕೊಳ್ಳಲು ತವಕಿಸುತ್ತಿದೆ. ಅದಕ್ಕೆ ಪೂರಕವಾಗಿ ಉನ್ನತ ಗುಣಮಟ್ಟದ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ
ನೋಕಿಯಾ ಇಂದು ತನ್ನ ನೂತನ ಫೋನ್ ಆದ ನೋಕಿಯಾ ಎಕ್ಸ್ 5 ಅನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಇದರ ಹಳೆಯ ಮಾದರಿಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದು ಈ ಫೋನ್ ಕೂಡಾ ಗ್ರಾಹಕರ ಮನಗೆಲ್ಲಲೂ ಸಜ್ಜಾಗಿದೆ ಎಂದೇ ಹೇಳಬಹುದು. ಈಗ ನೂತನವಾಗಿ ಬಿಡುಗಡೆಯಾಗಲಿರುವ ಈ ಫೋನ್ ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದ್ದು ಇದರಲ್ಲಿ 5.86 ಇಂಚಿನ ನಾಟ್ಚ್ ಪರದೆಯನ್ನು ಕಾಣಬಹುದಾಗಿದೆ. ಅಲ್ಲದೇ ಇದರಲ್ಲಿ ಡ್ಯೂಯಲ್ ಕ್ಯಾಮರಾಗಳಿದ್ದು, ಮುಂಭದಿಯಲ್ಲಿ 8 ಮೆಗಾಪಿಕ್ಸೆಲ್ ಮತ್ತು ಹಿಂಭದಿಯಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮರಾವಿದೆ ಮತ್ತು 720x1520 ದರ್ಜೆಯ ಪಿಕ್ಸೆಲ್ ಫೋಟೋವನ್ನು ನೀವು ಪಡೆಯಬಹುದಾಗಿದೆ. ಇದರಲ್ಲಿ 2GHz ಗಿಗಾ ಹರ್ಡ್ಸ್ ಒಕ್ಟಾ ಕೋರ್ ಪ್ರೊಸೆಸರ್ ಇದ್ದು, 3GB ರ್ಯಾಮ್ ಮತ್ತು 32GB ಹಾಗೂ 4GB ರ್ಯಾಮ್ ಮತ್ತು 64GB ಆಂತರಿಕ ಸಂಗ್ರಹಣೆಯ ಆವೃತ್ತಿಗಳು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಇದು ಆಡ್ರೊಂಯ್ಡ್ 8.1 ನಲ್ಲಿ ಕಾರ್ಯನಿರ್ವಹಿಸುತ್ತದೆ.
ನೋಕಿಯಾದ X ಆವೃತ್ತಿಗಳಲ್ಲಿ ಬಿಡುಗಡೆಯಾಗುತ್ತಿರುವ ಎರಡನೆಯ ಮೊಬೈಲ್ ಇದಾಗಿದ್ದು, ಮೂಲಗಳ ಪ್ರಕಾರ ಇದರ ಬೆಲೆಯು 32GB ಮೊಬೈಲ್‌ಗೆ 9999 ಮತ್ತು 64 GB ಗೆ 13999 ಎಂದು ಅಂದಾಜಿಸಲಾಗಿದೆ ಅಲ್ಲದೇ ನಾಳೆಯಿಂದ ಇದು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ. ಇದು ನೈಟ್ ಬ್ಲಾಕ್, ಬಾಲ್ಟಿಕ್ ಸೀ ಬ್ಲೂ ಮತ್ತು ಗ್ಲೇಸಿಯರ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ ಇದರಲ್ಲಿರುವ ಗ್ಲಾಸ್ ಕೋಟಿಂಗ್ ಫಿನಿಶಿಂಗ್ ಮೊಬೈಲ್ ಮೆರಗನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅಲ್ಲದೇ ಇದರ ಮುಂಭಾಗದ ನೋಟವು ಅತ್ಯಾಕರ್ಷಣಿಯವಾಗಿದ್ದು, ಕೆಳಭಾಗದಲ್ಲಿ ನೋಕಿಯಾದ ಬ್ರ್ಯಾಂಡ್ ಹೆಸರನ್ನು ಕಾಣಬಹುದಾಗಿದೆ. ಇದರ ಹಿಂಭಾಗದಲ್ಲಿ ಪಿಂಗರ್‌ಫ್ರಿಂಟ್ ಸೆನ್ಸಾರ್ ಇದ್ದು, ಹಿಂಭದಿಯಲ್ಲಿ ಲಂಭವಾಗಿ ಜೋಡಿಸಿದ ಎರಡು ಕ್ಯಾಮರಾವನ್ನು ನಾವು ಕಾಣಬಹುದಾಗಿದೆ.
ಇದೆಲ್ಲದರ ಹೊರತಾಗಿ ಈ ಮೊಬೈಲ್‌ನಲ್ಲಿ 3.5mm ಆಡಿಯೊ ಜಾಕ್ ಇದ್ದು, 4GVoLTE ಬೆಂಬಲಿಸುವ ಡ್ಯೂಯಲ್ ಸಿಮ್ ಬಳಸುವ ಅವಕಾಶವಿದೆ ಮತ್ತು ಮೈಕ್ರೋ ಎಸ್‌ಡಿ ಕಾರ್ಡ್ ಹಾಕುವ ಅವಕಾಶವಿದ್ದು 256GB ವರೆಗೂ ಸಂಗ್ರಹಣೆ ಸಾಮರ್ಥ್ಯವನ್ನು ಹೆಚ್ಚಿಸಬಹುದಾಗಿದೆ. ಇನ್ನೂ ಕ್ಯಾಮರಾ ಕುರಿತಂತೆ ಹೇಳುವುದಾದರೆ ಇದರಲ್ಲಿ 2.0 ಅಪೆರ್ಚ್ಯೂರ್ ಮತ್ತು 5 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್‌ಗಳು ಹಾಗೂ ಎಲ್‌ಇಡಿ ಪ್ಲಾಶ್ ಅನ್ನು ನಾವು ಕಾಣಬಹುದು ಹಾಗೆಯೇ ಮುಂಭದಿಯ ಕ್ಯಾಮರಾದಲ್ಲಿ ನೋಡುವುದಾದರೆ ಇದರಲ್ಲಿ 80.4 ಡಿಗ್ರಿ ವೀಕ್ಷಣೆ ಕೋನದಲ್ಲಿ ನಾವು ಫೋಟೋಗಳನ್ನು ಕ್ಲಿಕ್ ಮಾಡಬಹುದಾಗಿದೆ. ಅದಲ್ಲದೆ ಇದರಲ್ಲಿ AI ಚಿತ್ರದ ತಂತ್ರಜ್ಞಾನ ಮತ್ತು ಹಿಂಭಾಗವನ್ನು ಮಸುಕಾಗಿಸುವ ತಂತ್ರಜ್ಞಾನ ಮತ್ತು ಪೋರ್ಟಿಯೇಟ್ ಸ್ಕಿನ್ ಮೋಡ್, ಎಚ್‌ಡಿಆರ್ ಮೋಡ್ ಅನ್ನು ಅಳವಡಿಸಲಾಗಿದೆ.
ಇದರಲ್ಲಿರುವ ಇನ್ನೊಂದು ವಿಶೇಷವೇನೆಂದರೆ ಇದು 3060mAh ಬ್ಯಾಟರಿ ಅನ್ನು ಹೊಂದಿದ್ದು 27 ಗಂಟೆಗಳವರೆಗೆ ಬಳಸಬಹುದಾಗಿದೆ, ಅಲ್ಲದೇ 17.5 ತಾಸುಗಳಷ್ಟು ಸಮಯ ಮಾತನಾಡಬಹುದುಮತ್ತು 19.5 ಗಂಟೆಗಳವರೆಗೆ ಸಂಗೀತವನ್ನು ಆಲಿಸಬಹುದಾಗಿದೆ ಇದರಲ್ಲಿ ಯುಎಸ್‌ಬಿ ಸಂಪರ್ಕಗಳಿದ್ದು 4.2 ಬ್ಲೂಟುತ್, A-GPS, ವೈ-ಫೈ 802.11 a/b/g/n/ac, ಎಫ್‌ಎಮ್ ರೇಡಿಯೊ ಮತ್ತು ಎಂಬಿಯಂಟ್ ಸೆನ್ಸಾರ್, ಅಕ್ಸೆಲೆರೊಮೀಟರ್, ಡಿಜಿಟಲ್ ಕಂಪಾಸ್, ಗೈರೊಸ್ಕೋಪ್, ಪ್ರಾಕ್ಸೆಮಿಟಿ ಸೆನ್ಸಾರ್ ಅನ್ನು ಇದು ಹೊಂದಿದೆ.
ಒಟ್ಟಿನಲ್ಲಿ ಬೆಲೆಗಳ ದೃಷ್ಟಿಯಲ್ಲಿ ಹೇಳುವುದಾದರೆ ಈ ರೀತಿಯ ವೈಶಿಷ್ಟ್ಯಗಳನ್ನು ಹೊಂದಿರುವ ಮೊಬೈಲ್‌ಗಳು ಬೇರೆ ಕಂಪನಿಯ ಮೊಬೈಲ್ ಮಾದರಿಯಲ್ಲೂ ಲಭ್ಯವಿದ್ದರೂ, ಸ್ಯಾಮ್‌ಸಂಗ್ ಮತ್ತು ರೆಡ್‌ಮೀ ಬ್ರ್ಯಾಂಡ್‌ಗೆ ಹೋಲಿಸಿದರೆ ಇದರ ಬೆಲೆ ತುಂಬಾ ಕಡಿಮೆ ಎಂದೇ ಹೇಳಬಹುದು. ಈ ಮೊಬೈಲ್ ಫೋನ್ ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದ್ದು ಈಗಾಗಲೇ ಚೀನಾದ ಮಾರುಕಟ್ಟೆ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ನಾಳೆಯಿಂದ ಈ ಮೊಬೈಲ್ ಭಾರತದ ಮಾರುಕಟ್ಟೆಗೂ ಲಗ್ಗೆ ಇಡಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ನೋಕಿಯಾ ಮತ್ತೆ ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯ ಸಾಧಿಸುವ ತವಕದಲ್ಲಿದ್ದು ಈ ಮೊಬೈಲ್ ಅದಕ್ಕೆ ಪೂರಕವಾಗುವುದೇ ಕಾದುನೋಡಬೇಕಿದೆ.