ರಾಜ್ಯದಲ್ಲಿ ಭ್ರಷ್ಟಾಚಾರ ಹೇಗೆ ತಾಂಡವವಾಡುತ್ತಿದೆ ಎಂದು ನಾವು ಕೇಳುತ್ತಿದ್ದೇವೆ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷ ಹೇಳಿದ್ದಕ್ಕೂ ಈಗ ಮಾಡ್ತಿರೋದಕ್ಕೂ ಸಂಬಂಧವೇ ಇಲ್ಲ. ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ಕೊಡ್ತೀವಿ ಅಂತ ಹೇಳಿದ್ರು. ಸೂಪರ್ ಸಿಎಂ, ಶ್ಯಾಡೋ ಸಿಎಂಗಳ ನಾಮಕರಣ ಕೂಡ ಆಗಿದೆ. ಎಟಿಎಂ ಸರ್ಕಾರ ಅಂತ ಕೂಡ ಆಗಿದೆ. ಇಡೀ ದೇಶಕ್ಕೆ ಬೇಕಾದ ಹಣವನ್ನು ರಾಜ್ಯದಿಂದ ಕೊಡ್ತಿದ್ದಾರೆ ಎಂಬ ಆಪಾದನೆ ಇದೆ. ವಿಧಾನಸಭಾ ಚುನಾವಣೆಯ ಖರ್ಚನ್ನು ಸೇರಿ ವಸೂಲಿ ಮಾಡಲು ಮುಂದಾಗಿದ್ದಾರೆ ಎಂಬ ಮಾತಿದೆ. ಯಾವ ಮಂತ್ರಿಗೆ ಎಷ್ಟು ಟಾರ್ಗೆಟ್ ಕೊಡುವುದು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಅವರ ಸಭೆಯಲ್ಲಿ ಎಷ್ಟು ಇನ್ಕಮ್ ಅಂತ ಕೇಳು ಚರ್ಚೆ ಆಗುತ್ತಿದೆಯೇ ಹೊರತು ಬೇರೆ ಏನೂ ಚರ್ಚೆಯಾಗುತ್ತಿಲ್ಲವೆಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.