Publish Date: Fri, 09 Aug 2019 (17:11 IST)
Updated Date: Fri, 09 Aug 2019 (17:13 IST)
ನಾಯಿ ಸಾವಿಗೆ ಚಿರತೆಗಳೇ ಕಾರಣ ಅಂತ ಮೂರು ಚಿರತೆಗಳನ್ನು ಭೂಪನೊಬ್ಬ ಕೊದಿರೋ ಘಟನೆ ನಡೆದಿದೆ.
ಆರೋಪಿ ಸಾಕಿದ ಮೂರು ನಾಯಿ ಮರಿಗಳನ್ನು ಚಿರತೆಯೊಂದು ಹೊತ್ತುಕೊಂಡು ಹೋಗಿತ್ತು. ಅದರಲ್ಲಿ ಒಂದನ್ನು ಕೊಂದು ಸಾಯಿಸಿದ್ದರೆ, ಇನ್ನೆರಡು ಮರಿಗಳು ಗಂಭೀರ ಗಾಯಗೊಂಡಿದ್ದವು.
ಇದರಿಂದ ರೋಸಿ ಹೋಗಿದ್ದ ನಾಯಿ ಸಾಕಿದ ಮಾಲೀಕ, ಸತ್ತ ನಾಯಿ ದೇಹದ ಮೇಲೆ ವಿಷ ಹಾಕಿ ಕಾಡಿನಲ್ಲಿ ಬಿಸಾಕಿದ್ದಾನೆ. ಚಿರತೆಗಳಿಗೆ ವಿಷ ಹಾಕಿ ಮೂರು ಚಿರತೆಗಳ ಸಾವಿಗೆ ಕಾರಣ ಆಗಿದ್ದಾನೆ.
ಹರಿದ್ವಾರದಲ್ಲಿ ಘಟನೆ ನಡೆದಿದ್ದು, ಆರೋಪಿ ಸುಖಪಾಲ್ ಎಂಬಾತನನ್ನ ಪೊಲೀಸರು ಬಂಧನ ಮಾಡಿದ್ದಾರೆ.