Publish Date: Mon, 05 Aug 2019 (10:58 IST)
Updated Date: Mon, 05 Aug 2019 (11:00 IST)
ಬೆಳಗಾವಿ : ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿ ಸಾವನಪ್ಪಿದ ಘಟನೆ ನಡೆದಿದೆ.
ಹುಲಗಬಾಳಿ ಗ್ರಾಮದ ಮಾರುತಿ ಜಾಧವ್(38) ಸಾವನಪ್ಪಿದ ವ್ಯಕ್ತಿ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ ಹುಲಗಬಾಳಿ ಗ್ರಾಮದ ಬಳಿ ತೋಟದ ಮನೆಯಲ್ಲಿದ್ದ ಎಮ್ಮೆಯನ್ನು ರಕ್ಷಿಸಲು ತೆರಳಿದ್ದ ವೇಳೆ ಘಟನೆ ನಡೆದಿದೆ
ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮಾರುತಿ ಜಾಧವ್ ಅವರಿಗಾಗಿ ಹುಡುಕಾಟ ನಡೆಸಲಾಗಿದೆ ಎನ್ನಲಾಗಿದೆ.