Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಳಪೆ ಗುಣಮಟ್ಟದ ನುಗ್ಗೆ ಗಿಡ ನೀಡಿದ ಇಲಾಖೆ ವಿರುದ್ಧ ಬೇಸತ್ತು ಮರಗಳ ನಾಶ ಮಾಡಿದ ರೈತ

ಕಳಪೆ ಗುಣಮಟ್ಟದ ನುಗ್ಗೆ ಗಿಡ ನೀಡಿದ ಇಲಾಖೆ ವಿರುದ್ಧ ಬೇಸತ್ತು ಮರಗಳ ನಾಶ ಮಾಡಿದ ರೈತ
hoskote , ಬುಧವಾರ, 12 ಅಕ್ಟೋಬರ್ 2022 (17:01 IST)
ಒಂದು ಕಡೆ ಬೆಳೆದ ಬೆಳೆಯನ್ನು ಕಿತ್ತು ಬಿಸಾಕುತ್ತಿರುವ ರೈತ, ಮತ್ತೊಂದೆಡೆ ಟ್ರಾಕ್ಟರ್ ಮೂಲಕ ಬಂಗಾರದಂತಹ ಬೆಳೆಯನ್ನು ನಾಶ ಪಡಿಸುತ್ತಿರುವುದು. ಮತ್ತೊಂದೆಡೆ ಆಕ್ರೋಶದಿಂದ ಬೆಳೆದ ಮರಗಳನ್ನು ಕಟಾವು ಮಾಡುತ್ತಿರುವುದು. ಹೌದು ಈ ದೃಶ್ಯಗಳು ಕಂಡುಬಂದಿದ್ದು ಯಾವುದೋ ಸಿನಿಮಾದಲ್ಲಿ ಅಲ್ಲ ಬದಲಿಗೆ ಮನನೊಂದ ರೈತರು ತಮ್ಮ ಬೆಳೆಗಳನ್ನೆಲ್ಲಾ ನಾಶ ಪಡಿಸುತ್ತಿರುವುದು. ಹೌದು ರೈತರು ಬೆಳೆಗಳನ್ನು ಬೆಳೆದು ಅದರಿಂದ ಜೀವನ ಸಾಗಿಸುತ್ತಾ ನೆಮ್ಮದಿಯಿಂದ ಒಂದೊತ್ತು ಊಟ ಮಾಡುತ್ತಾರೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ವಾಗಟ ಗ್ರಾಮದಲ್ಲಿ ಈ ರೀತಿ ರೈತರು ತಾವು ಬೆಳೆದ ಬೆಳೆಗಳನ್ನೆಲ್ಲಾ ತಾವೇ ನಾಶ ಪಡಿಸಿ ರೈತರ ಬದುಕು ಯಾರಿಗೂ ಬೇಡ ಎಂಬಂತೆ ಆಕ್ರೋಶ ಹೊರ ಹಾಕುತ್ತಿದ್ದಾರೆ.
 
ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ವಾಗಟ ಗ್ರಾಮದ ರೈತ ರಮೇಶ್ ಎಂಬುವವರು ಸಾಲ ಸೋಲ ಮಾಡಿ ಸುಮಾರು 50 ಸಾವಿರ ಖರ್ಚು ಮಾಡಿ ಸೊಪ್ಪು ಬೆಳೆಯನ್ನು ಬೆಳೆದು ದಿನನಿತ್ಯ ಔಷಧಿಗಳನ್ನು ಸಿಂಪಡಿಸಿ ಬೆಳೆಯನ್ನು ಪೋಷಣೆ ಮಾಡುತ್ತಿದ್ದರು ಆದರೆ ಬೆಳೆ ಬೆಳೆದು ಇನ್ನೇನು ಕೈ ಸೇರಿ ಕಷ್ಟ ತೀರಿತು ಎಂದು ಭಾವಿಸುವಷ್ಟರಲ್ಲಿ ಸರಿಯಾದ ಬೆಲೆ ಸಿಗದೆ ಕಂಗೆಟ್ಟ ರೈತ ರಮೇಶ್ ಹಾಕಿದ ಬಂಡವಾಳ ಅಲ್ಲಾ ಇಷ್ಟು ದಿನಗಳ ಕಾಲ ಬೆಳೆಯನ್ನು ಪೋಷಣೆ ಮಾಡಲು ಖರ್ಚು ಮಾಡಿದ್ದು ಸಹ ಸಿಗದಂತಾಗಿದೆ ಎಂದು ಮನನೊಂದು ಟ್ರಾಕ್ಟರ್ ಮೂಲಕ ಸಂಪೂರ್ಣ ಬೆಳೆಯನ್ನು ನಾಶ ಪಡಿಸಿದ್ದಾರೆ.
 
ಮತ್ತೊಂದೆಡೆ  ಗ್ರಾಮದ ರೈತ ಗೋವಿಂದರಾಜು ಎಂಬುವವರು ಕೋಲಾರದ ಕೃಷಿ ಇಲಾಖೆಯಲ್ಲಿ ಬಾಗಲಕೋಟೆ ಬಾದಾಮಿ 2 ಎಂಬ ಉತ್ತಮ ತಳಿ ಎಂದು ಹೇಳಿ ನುಗ್ಗೆ ಗಿಡ ತಂದು ಸುಮಾರು 1 ವರ್ಷಗಳ ಕಾಲ ಅವುಗಳನ್ನು ಸುಮಾರು 1 ಲಕ್ಷಕ್ಕೂ ಅಧಿಕ ಖರ್ಚು ಮಾಡಿ 1 ಎಕರೆ ಪ್ರದೇಶದಲ್ಲಿ ಬೆಳೆಸಿದ್ದಾರೆ ಆದರೆ ಕಾಲ ಕಳೆದಂತೆಲ್ಲಾ ಗಿಡ ಬೆಳೆದು ಮರವಾಗಿದೇ ವಿನಹ ಯಾವುದೇ ರೀತಿಯ ಪಸಲು ಮರದಲ್ಲಿ ಬಿಡದ ಕಾರಣ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ರೈತ ಎತ್ತರಕ್ಕೆ ಬೆಳೆದಿದ್ದ ಸಂಪೂರ್ಣ ನುಗ್ಗೆ ಮರಗಳನ್ನು ಕತ್ತರಿಸಿ ಬಿಸಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
 
ಒಟ್ಟಿನಲ್ಲಿ ಒಂದಲ್ಲ ಒಂದು ರೀತಿಯಿಂದ ರೈತರ ಸಮಸ್ಯೆಗಳನ್ನು ಕೇಳುವವರು ಇಲ್ಲದೆ ಬೆಳೆದ ಬೆಳೆಯಿಂದ ಹೊಟ್ಟೆತುಂಬಿಸಿಕೊಳ್ಳಬೇಕಾದ ರೈತರೇ ತಾವು ಬೆಳೆದ ಬೆಳೆಯನ್ನು ತಮ್ಮ ಕೈಯಾರ ನಾಶ ಪಡಿಸಿ ರೈತರ ಕಷ್ಟ ಕೇಳುವವರು ಯಾರು ಅಧಿಕಾರಿಗಳೇ ಈ ರೀತಿಯಾಗಿ ರೈತರಿಗೆ ಮೋಸ ಮಾಡಿದರೆ ಹೇಗೆ ಎಂದು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾರಾಂತ್ಯದಲ್ಲಿ ದೆಹಲಿಗೆ ಸಿಎಂ ಭೇಟಿ