Publish Date: Wed, 30 Jan 2019 (18:58 IST)
Updated Date: Wed, 30 Jan 2019 (19:01 IST)
ದಾವಣಗೆರೆ ವಿಶ್ವ ವಿದ್ಯಾಲಯದ 6ನೇ ಘಟಿಕೋತ್ಸವ ನಡೆಯಿತು. ಘಟಿಕೋತ್ಸವದಲ್ಲಿ 12543 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ವಿಧ ವಿಭಾಗದ 32 ವಿದ್ಯಾರ್ಥಿಗಳಿಗೆ 62 ಗೋಲ್ಡ್ ಮೆಡಲ್, ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ತೇಜಸ್ವಿನಿ ಕೆ ಸಿಗೆ 6 ಚಿನ್ನದ ಪದಕ, 13 ಪಿಎಚ್ ಡಿ ಹಾಗೂ ಸಾಮಾಜಿಕ ಸೇವೆ ಗುರ್ತಿಸಿ ಡಾ. ಎಸ್. ಎಮ್. ಎಲಿ ಯವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ನ್ಯಾಕ್ ನಿರ್ದೇಶಕ ಪ್ರೊ. ಎಸ್. ಸಿ. ಶರ್ಮ ಭಾಗಿಯಾಗಿದ್ದರು. ಕುಲಸಚಿವ ಡಾ. ಎಸ್. ವಿ. ಹಲಸೆ ಅಧ್ಯಕ್ಷತೆಯಲ್ಲಿ ಘಟಿಕೋತ್ಸವ ನಡೆಯಿತು.
ರಾಜ್ಯಪಾಲ ವಜುಬಾಯಿ ವಾಲಾ ಹಾಗೂ ಉನ್ನತ ಶಿಕ್ಷಣ ಸಚಿವ ಜಿ. ಟಿ. ದೇವೇಗೌಡ ಅವರ ಅನುಪಸ್ಥಿತಿಯಲ್ಲಿ ಘಟಿಕೋತ್ಸವ ನಡೆಯಿತು.