ನಾನೆಂದೂ ಅಧಿಕಾರದ ಬೆನ್ನು ಹತ್ತಿಲ್ಲ. ಸಭಾಪತಿ ಸ್ಥಾನ ಆಕಾಂಕ್ಷಿ ಎಂದು ಯಾವತ್ತೂ ಹೇಳಿಕೊಂಡಿಲ್ಲ. ಅಲ್ಲದೇ ನನ್ನ ಡಿಕ್ಷನರಿಯಲ್ಲೇ ದ್ವೇಷ ಎನ್ನುವ ಪದವಿಲ್ಲ. ಕಾಂಗ್ರೆಸ್ ಹಿರಿಯ ನಾಯಕ ಹೇಳಿಕೊಂಡಿದ್ದಾರೆ.
ನಾನು ಸಭಾಪತಿ ಸ್ಥಾನದ ಆಕಾಂಕ್ಷಿ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಕುರ್ಚಿಗೆ ಎಂದೂ ಅಂಟಿಕೊಂಡಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್.ಪಾಟೀಲ್ ಹೇಳಿಕೊಂಡಿದ್ದಾರೆ.
ಬಾದಾಮಿಯಲ್ಲಿ ಮಾಜಿ ಸಚಿವ ಎಸ್. ಆರ್. ಪಾಟಿಲ್ ಹೇಳಿಕೆ ನೀಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರೆಂಬ ಹಿನ್ನೆಲೆ ತಮ್ಮನ್ನು ಕಾಂಗ್ರೆಸ್ ನಲ್ಲಿ ಕಡೆಗಣಿಸಿದ್ದಾರಾ? ಎಂಬ ಪ್ರಶ್ನೆಗೆ ಜಾಣ ಉತ್ತರ ನೀಡಿ, ನಾನು ಕಾಂಗ್ರೆಸ್ ಮನುಷ್ಯ. ನಿಷ್ಟಾವಂತ ಕಾರ್ಯಕರ್ತ ಎಂದು ಹಾರಿಕೆ ಉತ್ತರ ನೀಡಿದ್ದಾರೆ.
ಸಿಎಂ ಕುಮಾರಸ್ವಾಮಿಯವರು ಕಣ್ಣೀರಿಗೆ ಸಿದ್ದರಾಮಯ್ಯ ಕಾರಣ ಎಂಬ ಕೆ.ಬಿ. ಕೋಳಿವಾಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಕೆ.ಬಿ. ಕೋಳಿವಾಡ ಅವರದ್ದು ವಯಕ್ತಿಕ ಅಭಿಪ್ರಾಯ.
ಅವರು ಯಾಕೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಸಿದ್ದರಾಮಯ್ಯ ಬಗ್ಗೆ ಹಾಗೆ ಹೇಳಬಾರದಿತ್ತು ಎಂದರು. ಅಲ್ಲದೇ ನನ್ನ ಸೋಲಿಗೆ ಎಸ್. ಆರ್. ಪಾಟೀಲ್ ಕಾರಣ ಎಂಬ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ನನ್ನ ಡಿಕ್ಷನರಿಯಲ್ಲೇ ದ್ವೇಷ ಎನ್ನುವ ಪದವಿಲ್ಲ ಎಂದಿದ್ದಾರೆ.