Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಳಗಾವಿ : ಆರ್ಎಸ್ಎಸ್ ಸಮಾಜದ ಪರವಾಗಿ ಕೆಲಸ ಮಾಡುತ್ತದೆ. ಆ ಸಂಘಟನೆ ಮಾಡುವುದೆಲ್ಲ ಒಳ್ಳೆಯದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಮತಾಂತರ ನಿಷೇಧ ಮಸೂದೆ ಅನುಮೋದನೆ ಆಗಿದೆ. ಸದನದಲ್ಲಿ ಇಂದು ಬಹಳಷ್ಟು ಚರ್ಚೆಗಳು ಆಗಿದೆ. ಆಮಿಷಕ್ಕೆ ಒಳಗಾಗಿ ಮತಾಂತರ ಆಗಬಾರದು ಅಂತಾ ಜಾರಿ ಮಾಡಿದ್ದೇವೆ.
ಪಾರದರ್ಶಕವಾಗಿ ಆಗಬೇಕು ಅಂತಾ ಮಸೂದೆ ಪಾಸ್ ಮಾಡಲಾಗಿದೆ ಎಂದು ನುಡಿದರು. ಈ ಕಾಯ್ದೆ ಸಮಾಜಕ್ಕೆ ಒಳ್ಳೆಯದಾಗುವಂತದ್ದು. ಕಾಯ್ದೆ ಜಾರಿ ಮಾಡಿದ ಕ್ರೆಡಿಟ್ ಬಿಜೆಪಿ ಪಕ್ಷಕ್ಕೆ ಬರುತ್ತೆ. ವಿರೋಧ ಪಕ್ಷ ಮಾಡಿದ್ದರೆ ಅವರಿಗೆ ಕ್ರೆಡಿಟ್ ಹೋಗುತ್ತಿತ್ತು.