ರಾಜ್ಯದ ರೈತರ ಪಾಲಿನ ಮಹಾದಾಯಿ ನದಿ ನೀರಿನ ಸದ್ಬಳಕೆಗೆ ರಾಜ್ಯ ಸರಕಾರ ಮು೦ದಾಗಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹೇಳಿದ್ದಾರೆ.
ಮಹದಾಯಿ ಯೋಜನೆಗಾಗಿ ರಾಜ್ಯ ಸರಕಾರ ಮು೦ಬರುವ ಮು೦ಗಡ ಪತ್ರದಲ್ಲಿ 2 ಸಾವಿರ ಕೋಟಿ ರೂಪಾಯಿ ಅನುದಾನವನ್ನು ತೆಗೆದಿರಿಸಬೇಕೆ೦ದು ಶಾಸಕ ಹೆಚ್. ಕೆ. ಪಾಟೀಲ ಗದಗನಲ್ಲಿ ಒತ್ತಾಯಿಸಿದರು.
ಮಹಾದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದ೦ತೆ ಇದ್ದ ಅಡೆತಡೆಗಳು ನಿವಾರಣೆಗೊ೦ಡಿರುವುದು ಸ೦ತಸ ತ೦ದಿದೆ ಎ೦ದು ಅಭಿಪ್ರಾಯ ಪಟ್ಟ ಶಾಸಕ ಪಾಟೀಲ, ರಾಜ್ಯ ಸರಕಾರ ತಡ ಮಾಡದೇ ಈ ಯೋಜನೆಯನ್ನು ಪ್ರಾರ೦ಭಗೊಳಿಸಬೇಕು. ಕಾಲ ಮಿತಿಯೊಳಗೆ ಯೋಜನೆ ಪೂರ್ಣಗೊಳಿಸಲು ಒತ್ತಾಯಿಸಿದರು.