Webdunia - Bharat's app for daily news and videos

Install App

ಕಾಂಗ್ರೆಸ್ ಸರ್ಕಾರದ 5 ಗ್ಯಾರೆಂಟಿ ಯೋಜನೆಗಳಿಗೆ ಅಸ್ತು ಎಂದ ಸಿಎಂ

Webdunia
ಶುಕ್ರವಾರ, 2 ಜೂನ್ 2023 (17:06 IST)
ಇಂದು ಸಿಎಂ ಸಿದ್ದರಾಮಯ್ಯ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಹೇಳಿದಂತಹ 5 ಗ್ಯಾರೆಂಟಿ ಯೋಜನೆಗಳನ್ನ ಜಾರಿ ಮಾಡಿದ್ದಾರೆ.ಇನ್ನೂ ಸಿಎಂ ಸಿದ್ದರಾಮಯ್ಯ ಯಾವ ಯಾವ ಯೋಜನೆಗ ಎಂದು ಜಾರಿಯಾಗುತ್ತೆ,ಅರ್ಜಿ ಸಲ್ಲಿಸುವ ಕುರಿತು ಸಹ ಮಾಹಿತಿ ನೀಡಿದ್ದಾರೆ-
 
ಗ್ಯಾರೆಂಟಿ 1: ಗೃಹ ಜ್ಯೋತಿ
 
ಇದು ನಮ್ಮ ಮೊದಲ ವಾಗ್ದಾನ, 200 ಯೂನಿಟ್ ವಿದ್ಯುತ್ ನೀಡುತ್ತೇವೆ. ಈ ಗ್ಯಾರೆಂಟಿ ಜಾರಿ ಮಾಡಲು ತೀರ್ಮಾನ ಮಾಡಲಾಗಿದೆ. ಬಾಳೆಕೆಯಾಗುವ ಯೂನಿಟ್ ವಾರ್ಷಿಕ   ಸಾರಾಸರಿ ಪಡೆಯುತ್ತೇವೆ, ಸಾರಾಸರಿ ಪ್ರಮಾಣದ ಮೇಲೆ 200 ಯೂನಿಟ್ ಮೀರದಂತೆ ಇದ್ದಲ್ಲಿ ವಿದ್ಯುತ್ ಉಚಿತ.
 
ಈ ಭಾರಿ (ಜೂನ್ ) ತಿಂಗಳ ಬಿಲ್ ತಯಾರಾಗಿದೆ, ಹೀಗಾಗಿ ಜುಲೈ ತಿಂಗಳಿಂದ ಈ ಗ್ಯಾರೆಂಟಿ ಜಾರಿ.
 
ಗ್ಯಾರೆಂಟಿ 2: ಗೃಹ ಲಕ್ಷ್ಮಿ
 
ಈ ಯೋಜನೆ ಜಾರಿ ಮಾಡಲು ತೀರ್ಮಾನ ಆಗಿದೆ. ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಬೇಕಿದೆ. ಜೊತೆಗೆ ಮನೆ ಯಜಮಾನಿ ಯಾರು ಎಂದು ತೀರ್ಮಾನ ಮಾಡಬೇಕು. ಈ ಯೋಜನೆ ಎಲ್ಲಾ ವರ್ಗಕ್ಕೂ ಜಾರಿ ಆಗಲಿದೆ, ಬಿಪಿಲ್ ಹಾಗೂ ಎಪಿಲ್ ಕಾರ್ಡ್ ಇವಬರಿಗೂ ಈ ಯೋಜನೆ ಜಾರಿ. ಯಜಮಾನಿ ಎನ್ನುವುದು ಅರ್ಜಿಯಲ್ಲಿ ಅರ್ಜಿದಾರರು ದೃಡೀಕರಿಸಬೇಕು.
 
ಆಗಸ್ಟ್ 15ಕ್ಕೆ ಈ ಯೋಜನೆ ಜಾರಿ, ಈ ಮದ್ಯೆ ಜೂನ್ 15 ರಿಂದ ಜುಲೈ 15ರ ವರೆಗೆ ಅರ್ಜಿ ಜೊತೆಗೆ ಖಾತೆ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ನೀಡಬೇಕು. ಹಾಗೂ ಬೇರೆ ಯೋಜನೆಗಳಿಂದ ಹಣ ಪಡೆಯುತ್ತಿದ್ದರೂ ಈ ಯೋಜನೆ ಅಡ್ಡಿ ಆಗಲ್ಲ, ಈ ಯೋಜನೆಗೆ ಅವರು ಹಕ್ಕುದಾರರು.
 
ಗ್ಯಾರಂಟಿ 3: ಅನ್ನಭಾಗ್ಯ
 
ಕೇಂದ್ರ ಸರ್ಕಾರ ಐದು ಕೆಜಿಗೆ ಕಡಿಮೆ ಮಾಡಿದ್ದಾರೆ. ನಾವು ಹತ್ತು ಕೆಜೆ ಆಹಾರ ದಾನ್ಯ ನೀಡುತ್ತೇವೆ ಎಂದು ಮಾತು ಕೊಟ್ಟಿದ್ವಿ. ಜುಲೈ 1 ರಿಂದ ಎಲ್ಲಾ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಇರುವವರಿಗೆ ಅನ್ನಭಾಗ್ಯ ಜಾರಿ.
 
ಈ ತಿಂಗಳು ಹತ್ತು ಕೆಜೆ ನೀಡುವಷ್ಟು ಸ್ಟಾಕ್ ಇಲ್ಲದ ಕಾರಣ, ಜುಲೈ ಒಂದರಿಂದ ಅನ್ನಭಾಗ್ಯ ಜಾರಿ. ಕಾರ್ಡ್ ಇರುವವರಿಗೆ ತಲಾ ಹತ್ತು ಕೆಜಿ ನೀಡುತ್ತೇವೆ.
 
ಗ್ಯಾರೆಂಟಿ 4: ಶಕ್ತಿ
 
ಸಮಾಜದಲ್ಲಿ ಸುಮಾರು 50% ಮಹಿಳೆಯರು ಇದ್ದಾರೆ, ಈ ತಿಂಗಳ ಜುಲೈ 11ರಿಂದ ವಿದ್ಯಾರ್ಥಿಗಳಿಗೆ ಸೇರಿದಂತೆ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಬಹುದು. ಇದು ರಾಜ್ಯದೊಳಗೆ ಪ್ರಯಾಣ ಮಾಡಬಹುದು. ಇದು ಬಿಎಂಟಿಸಿ ಹಾಗೂ KSRTC ಗೆ ಅನ್ವಯ.
 
ಹವಾನಿಯಂತ್ರಣ (AC), ಸ್ಲೀಪರ್ ಹಾಗೂ ರಾಜಹಾಂಸ ಬಸ್ ಹೊರತು ಪಡಿಸಿ, ಎಲ್ಲಾ ಬಸ್ ನಲ್ಲಿ ಪ್ರಯಾಣ ಮಾಡಬಹುದು. ಇದು ರಾಜ್ಯದವರಿಗೆ ಹಾಗೂ ರಾಜ್ಯದೊಳಗೆ ಪ್ರಯಾಣ. ಜೊತೆಗೆ ಗಂಡಸರಿಗೆ KSRTC ಶೇ 50 ಸೀಟ್ ಮೀಸಲು.
 
ಗ್ಯಾರೆಂಟಿ 5: ಯುವನಿಧಿ
 
2022-23 ವ್ಯಾಸಂಗ ಮಾಡಿ, ತೇರ್ಗಡೆ ಆದ ಎಲ್ಲಾ ಪದವೀಧರರು ಹಾಗೂ ಡಿಪ್ಲೋಮ ಪದವೀಧರರಿಗೆ ಈ ಯೋಜನೆ ಜಾರಿ. 24 ತಿಂಗಳಂತೆ ಪ್ರತಿ ಮಾಸ ₹3000/₹1500 ಹಣ ಸಹಾಯ ಮಾಡಲಾಗುವುದು. 24 ತಿಂಗಳೊಳಗೆ ಖಾಸಗಿ ಅಥವಾ ಸರ್ಕಾರಿ ಕೆಲಸ ಸಿಕ್ಕ ಸಂದರ್ಭದಲ್ಲಿ ಯೋಜನೆ ನಿಲ್ಲಲಿದೆ. ಈ ಯೋಜನೆಗೆ ತೃತೀಯ ಲಿಂಗ ಸಮುದಾಯ ಕೂಡ ಸೇರಲಿದೆ.
 
ಯುವನಿಧಿ ಯೋಜನೆ ಪ್ರಕಾರ ಪದವಿ ಪಡೆದು 180 ದಿನ ಕೆಲಸ ಇಲ್ಲದೆ ಇರಬೇಕು ಹಾಗೂ ಅರ್ಜಿ ಸದ್ಯದಲ್ಲೇ ಕರೆಯಲಾಗುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ